ಹೊಸದಿಲ್ಲಿ: ಮಂಗಳವಾರ ರಾತ್ರಿ ಪ್ರಧಾನಿ ಮೋದಿ ದೇಶಾದ್ಯಂತ 3 ವಾರಗಳ ಕಾಲ ಲಾಕ್ ಡೌನ್ ಆದೇಶಿಸಿದರು. ಲಾಕ್ ಡೌನ್ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆ ಇದಾಗಿದ್ದು, ಸಭೆಯಲ್ಲಿ ಸಚಿವರ ನಡುವೆ ಪ್ರಧಾನಿ ಮೋದಿ ಅಂತರ ಕಾಯ್ದಿರಿಸಿದ್ದು ವಿಶೇಷವಾಗಿ ಕಂಡು ಬಂದಿದೆ.
ಸಾಮಾನ್ಯವಾಗಿ ಸಚಿವ ಸಂಪುಟ ಸಭೆಗಳಲ್ಲಿ ಎಲ್ಲಾ ಸಚಿವರು ಸನಿಹದಲ್ಲೇ ಕುಳಿತುಕೊಳ್ಳುತ್ತಾರೆ ಆದರೆ ದೇಶಾದ್ಯಂತ ಕೊರೋನಾ ಭೀತಿ ಹೆಚ್ಚಾಗಿರುವ ಕಾರಣ ಸಂಪುಟ ಸಭೆಯಲ್ಲಿಯೂ ಸಚಿವರ ಕುರ್ಚಿಗಳಲ್ಲಿ ಅಂತರ ಕಾಯ್ದುಕೊಂಡಿದ್ದಾರೆ.
ಈ ಕುರಿತು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ‘ಸಾಮಾಜಿಕ ಅಂತರ ಅತ್ಯವಶ್ಯಕವಾಗಿದ್ದು, ನಾವು ಅದನ್ನು ಖಾತ್ರಿಪಡಿಸುತ್ತಿದ್ದೇವೆ.. ನೀವು? ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಇಂದಿನ ಸಚಿವ ಸಂಪುಟ ಸಭೆಯ ಚಿತ್ರ ಇದಾಗಿದೆ.’ ಎಂದು ಪೋಸ್ಟ್ ಮಾಡಿದ್ದಾರೆ.
Social distancing is need of the hour. We are ensuring it… Are you?
Picture from today’s cabinet meeting chaired by Hon’ble PM @narendramodi ji.#IndiaFightsCorona pic.twitter.com/Lr76lBgQoa
— Amit Shah (@AmitShah) March 25, 2020