ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆದಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ಬಗ್ಗೆ ಚರ್ಚೆ ನಡೆದಿದೆ.
ಈ ಕುರಿತು ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್ ವಿವರಿಸಿದರು.
ಕೋವಿಡ್ ಮಧ್ಯಂತರ ವರದಿ ಬಗ್ಗೆ ಸಿದ್ದರಾಮಯ್ಯ ಅವರೇ ಪ್ರಸ್ತಾಪಿಸಿದ್ದು ಗಂಭೀರ ಚರ್ಚೆಯಾಗಿದೆ. ವರದಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಕೆಲವು ಫೈಲ್ ಮಿಸ್ ಆಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪ ಆಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೊಟ್ಟ ವಿವರ ಸಹ ವರದಿಯಲ್ಲಿ ಬಂದಿದೆ. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅಧಿಕಾರಿಗಳು ಈ ವರದಿ ಬಗ್ಗೆ ತಿಂಗಳ ಒಳಗಾಗಿ ವಿವರ ಕೊಡುತ್ತಾರೆ. ವಿವರವಾದ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು
- ರಾಜ್ಯದ ಒಳಾಡಳಿತ ಇಲಾಖೆ 59 ಜನ ಕೈದಿಗಳ ಸನ್ನಡತೆ ಆಧಾರದ ಮೇಲೆ ಅವಧಿ ಮುನ್ನ ಬಿಡುಗಡೆಗೆ ನಿರ್ಧಾರ.
- ವಸತಿ ಇಲಾಖೆಯಲ್ಲಿ ಬೆಟ್ಟಗೇರಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ.
- ಕಾರ್ಮಿಕ ಇಲಾಖೆಯ ಬಳಕೆದಾರರಿಂದ ಸಂಗ್ರಹಿಸುವ, ಕಾನೂನು ಇಲಾಖೆ ಅಡಿ ಬರುವ ಎಂಟು ಕಾಯ್ಡೆ ಅಡಿ, ಬಳಕೆದಾರರಿಂದ ಸಂಗ್ರಹಿಸುವ ದಂಡವನ್ನ 30% ಹೆಚ್ಚಳಕ್ಕೆ ನಿರ್ಧಾರ.
- ಕಾನೂನು ಸೇವಾ ತಿದ್ದುಪಡಿ ಕರಡು ನಿಯಮಗಳಿಗೆ 15 ದಿನ ಅವಕಾಶ ನೀಡುವುದು, ಆಕ್ಷೇಪಣೆ ಬಾರದಿದ್ರೆ ಸದರಿ ಕರಡು ನಿಯಮ ಮಂಡಿಸದೆ ನಿರ್ಣಯ ತೆಗೆದುಕೊಳ್ಳಲು ಅನುಮೋದನೆ.
- ವೈದ್ಯಕೀಯ ಶಿಕ್ಷಣ ಇಲಾಖೆ, ಕಿಮ್ಸ್ ಆಸ್ಪತ್ರೆಗೆ ಸಲಕರಣೆ ಖರೀದಿಗೆ 75 ಕೋಟಿ ಅನುದಾನ ನೀಡಲು ಅನುಮೋದನೆ.
- ಮೈಸೂರಿನ ನೆಫ್ರೋಲಜಿ ನೂರು ಬೆಡ್ ಸಾಮರ್ಥ್ಯ ಹೆಚ್ಚಳಕ್ಕೆ ಅನುಮೋದನೆ.
- ಕಲಬುರಗಿಯ ಮಕ್ಕಳ ಆಸ್ಪತ್ರೆಯನ್ನ ಇಂದಿರಾಗಾಂಧಿ ಆಸ್ಪತ್ರೆ ಸಹಯೋಗದಲ್ಲಿ 150 ಹಾಸಿಗೆ ಆಸ್ಪತ್ರೆ ಸ್ಥಾಪನೆಗೆ 221 ಕೋಟಿ ಬಿಡುಗಡೆಗೆ ಅನುಮೋದನೆ
- ಅನ್ನಭಾಗ್ಯ ಯೋಜನೆ ಅಡಿ 5k.g ಅಕ್ಕಿಯ ಹಣವನ್ನ ನೀಡುವ ಯೋಜನೆ ಮುಂದುವರೆಸಲು ನಿರ್ಧಾರ (ವ್ಯಕ್ತಿಗೆ 170 ರೂ ಹಣವನ್ನ ನೀಡಲಿರೋ ಸರ್ಕಾರ).
- ಬೆಂಗಳೂರು ನೆಪ್ರೋ- ಯುರಾಲಜಿ ಆಸ್ಪತ್ರೆಯ ಹೊರ ರೋಗಿಗಗಳ ವಿಭಾಗಗಕ್ಕೆ ನೂತನ ಕಟ್ಟಡಕ್ಕೆ 16.15 ಕೋಟಿಗೆ ಅನುಮೋದನೆ.
- ಕಂದಾಯ ಇಲಾಖೆಯ ಸಹಾಯಕ ಉಪನೋಂದಣ ಅಧಿಕಾರಿ ವರ್ಗಾವಣೆ ಅವಧಿಯನ್ನು 30-09-24ರ ವರೆಗೂ ವಿಸ್ತರಣೆಗೆ ಅನುಮೋದನೆ.
- ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹೊಸ ಉದ್ಯೋಗ ಅವಕಾಶ ಒಂದು ಲಕ್ಷ ಮಹಿಳೆಯರಿಗೆ 2500 ಕಾಫಿ ಕಿಯೋಸ್ಕ್ಗಳನ್ನ ಒದಗಿಸಲು ಕ್ರಮ 25 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ.
- ರಾಜ್ಯದ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ನೂತನ ವಾಹನ ಪಿಟ್ನಸ್ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ.
- 341 ಕೋಟಿಯಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಸ್ಥಾಪನೆ.. ಯೋಜನೆಗೆ ಘಟನೋತ್ತರ ಅನುಮೋದನೆ.
- ಸ್ಕ್ರಾಪಿಂಗ್ ವಾಹನಗಳ ಮೇಲಿನ ದಂಡ ವಿನಾಯತಿ ದಿನಾಂಕ ವಿಸ್ತಾರಣೆ ಅನುಮೋದನೆ – 31-03-26ರ ವರೆಗೆ.
- ಪಿಪಿಪಿ ಮಾದರಿಯಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ಮಾಡಲು ಅನುಮೋದನೆ.
- ಉಡುಪಿಯ ಕಾರ್ಕಳದಲ್ಲಿ ಪಿಪಿಪಿ ಮಾದರಿಯಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ಮಾಡಲು ಅನುಮೋದನೆ.
- ಸ್ಥಳೀಯ ಉದ್ಯೋಗಿಗಳಿಗೆ ಕೌಶಲ್ಯತೆ ನೀಡಲು ನಿಪುಣ ಕರ್ನಾಟಕ ಉಪಕ್ರಮ ಹೆಸರಲ್ಲಿ 100 ಕೋಟಿ ವೆಚ್ಚದಲ್ಲಿ ಟ್ರೈನಿಂಗ್ ನೀಡಲು ಅನುಮೋದನೆ .
- ಕರ್ನಾಟಕ ಜೈವಿಕ ತಂತ್ರಜ್ಞಾನ ಅಡಿಯಲ್ಲಿ ಐದು ವರ್ಷಗಳ ಕಾಲ ನಾಲ್ಕು ಕೋಟಿ ವೆಚ್ಚದಲ್ಲಿ ಪ್ರೋತ್ಸಾಹ ದನ ನೀಡಲು ಅನುಮೋದನೆ.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ನೀಡಲು ಅನುಮೋದನೆ.
- ಆಹಾರ ಇಲಾಖೆ ಇಂದ ಪಡಿತರ ಫಲಾನುಭವಿಗಳಿಗೆ ಹಣದ ಬದಲು, ಆಹಾರ ನೀಡುವ ಚಿಂತನೆ ಇತ್ತು.. DBT ಮೂಲಕ ಹಣವನ್ನ ಮುಂದುವರೆಸಲು ನಿರ್ಧಾರ