ಚಿಕ್ಕಮಗಳೂರು: ಪ್ರವಾಸೋಧ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಬಿಜೆಪಿ ಶಕ್ತಿ ಕೇಂದ್ರಗಳ ವತಿಯಿಂದ ಕೊರೋನಾ ವಾರಿಯರ್ಸ್ಗಳನ್ನು ಗೌರವಿಸುವ ಜೊತೆಗೆ, ಸ್ವಚ್ಛತಾ ಕಾರ್ಯಕ್ರಮ, ವನಮಹೋತ್ಸವ ಹಾಗೂ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು.
ಬಾಬುರಾವ್ ಶಕ್ತಿ ಕೇಂದ್ರದಿಂದ ನಗರದ ಮುನ್ಸಿಪಲ್ ಆಸ್ಪತ್ರೆಯಲ್ಲಿ ವೈಧ್ಯಾಧಿಕಾರಿ ಡಾ.ದಿವ್ಯ ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ಮೂಗ್ತೀಹಳ್ಳಿ ಅಮೃತೇಶ್ವರ ದೇವಾಲಯದ ಆವರಣದಲ್ಲಿ ಗ್ರಾಮಾಂತರ ಬಿಜೆಪಿ ಕಾರ್ಯಕರ್ತರು ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಸ್.ವಿಕ್ರಾಂತ್ ನೇತೃತ್ವದಲ್ಲಿ ವನಮಹೋತ್ಸವ ಆಚರಿಸಿದರು.
ಜಗನ್ನಾಥರಾವ್ ಶಕ್ತಿ ಕೇಂದ್ರದ ಆರು ವಾರ್ಡ್ಗಳ ಕಾರ್ಯಕರ್ತರು ಬೆಳಗ್ಗೆ ಬೋಳರಾಮೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕದೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಮುಖಂಡ ಅನ್ವರ್ ನೇತೃತ್ವದಲ್ಲಿ ಬೆಳಗ್ಗೆ ನಗರದಲ್ಲಿ ಪೌರಕಾರ್ಮಿಕರಿಗೆ ಸಹಿ ಹಂಚಲಾಯಿತು.