ಹೊಸ ದಿಗಂತ ವರದಿ, ಕಲಬುರಗಿ:
ತಾಲೂಕಿನ ಸಣ್ಣೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿದ ಸಣ್ಣೂರ್ ಗ್ರಾಮದ ಬಿಜೆಪಿ ಬೆಂಬಲಿತ 5 ಅಭ್ಯರ್ಥಿಗಳಾದ ಶಿವಪುತ್ರಪ್ಪ ಪಾಟೀಲ್ (ಪಡೆದ ಮತಗಳು 713 ಮತಗಳಲ್ಲಿ 445) ಮಾಲಾಶ್ರೀ ಶಿವಮೂರ್ತಿ ಮ್ಯಾಕೇರಿ(713 ಮತಗಳಲ್ಲಿ 507) ಮಾಣಿಕ್ ಜಾಧವ್, ಭರತ ಜಾಧವ್, ಸಬಿಹಾ ಸಲೀಂ ಮಾಸಿಲ್ದಾರ್ ಆವರು ವಿಜಯ ಸಾಧಿಸಿದ್ದಾರೆ.
ಬಿಜೆಪಿ ಮುಖಂಡ ಜಗದೀಶ್ ಪಾಟೀಲ್ ಸಣ್ಣೂರ ಮತ್ತು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಟಗಿ ಗೆದ್ದ ಅಭ್ಯರ್ಥಿಗಳೊಂದಿಗೆ ವಿಜಯದ ಸಂಕೇತ ತೋರಿಸಿದರು.
ಈ ಸಂದರ್ಭದಲ್ಲಿ ವಿಜಯ ಕುಮಾರ್ ಜಮಾದಾರ್, ಮೌಲಾ ಬಳಿಗಾರ, ರಾಮಲಿಂಗ ಪೂಜಾರಿ, ಶಿವಶರಣಪ್ಪ ಸುರಾ, ನಾಗೇಂದ್ರಪ್ಪ ಶಿರಗಾ, ಪ್ರಸಾದ್ ಪಟ್ಟಣಕರ್, ನಾಗರಾಜ ಎದುರಮನಿ, ಉತ್ತಮ್, ಭಗವಂತ, ಸೋಮು ತೆಳಕೇರಿ ಅಶೋಕ ಮೇಲಗೇರಿ ಅಶೋಕ ಹಡಪದ ಸೇರಿದಂತೆ ಅನೇಕ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.