ನಮ್ಮ ಕೂದಲು ದಪ್ಪ ಹಾಗೂ ಕಪ್ಪಾಗಿರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ ಆದರೆ ಕೆಲವೊಮ್ಮೆ ನಮ್ಮ ಸಣ್ಣ ವಯಸ್ಸಿನಲ್ಲಿಯೇ ತಲೆ ಕೂದಲು ಕಪ್ಪಾದರೆ ನಮಗೆ ಅದೊಂದು ದೊಡ್ಡ ಚಿಂತೆಯೇ ಆಗಿಬಿಡುತ್ತದೆ.
ನಮ್ಮ ಕೂದಲು ಕಪ್ಪಾಗಲು ಇಲ್ಲಿದೆ ಕೆಲವು ಸಿಂಪಲ್ ಮನೆಮದ್ದುಗಳು,ಬನ್ನಿ ಹಾಗಿದ್ದರೆ ಇದನ್ನು ತಿಳಿದು ನೀವು ಅನುಸರಿಸಿ,
ನೆಲ್ಲಿಕಾಯಿ: ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಅದು ತಣ್ಣಗಾದ ಮೇಲೆ ಪ್ರತಿ ದಿನ ಕೂದಲಿಗೆ ಹಚ್ಚುವುದರಿಂದ ನಮ್ಮ ಕೂದಲು ಸಜಜವಾಗಿಯೇ ಕಪ್ಪಾಗುತ್ತದೆ.
ಕರಿಬೇವು: ಕೊಬ್ಬರಿ ಎಣ್ಣೆ, ಕರಿಬೇವಿನ ಎಲೆಗಳನ್ನು ಚೆನ್ನಾಗಿ ಕುದಿ ನಂತರ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗಿ, ಕೂದಲು ಉದರುವ ಸಮಸ್ಯೆಯು ಕಡಿಮೆಯಾಗುತ್ತದೆ.
ಕೊಬ್ಬರಿ ಎಣ್ಣೆ: ಕೂದಲಿಗೆ ಅತ್ಯುತ್ತಮವಾಗಿ ಕೆಲಸ ಮಾಡುವುದರಲ್ಲಿ ಕೊಬ್ಬರಿ ಎಣ್ಣೆ ಪ್ರಮುಖವಾದದ್ದು, ಕೊಬ್ಬರಿ ಎಣ್ಣೆ ಜೊತೆಗೆ ಲಿಂಬೆ ರಸವನ್ನು ಸೇರಿಸಿ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಬಿಳಿಕೂದಲಿಗೆ ಪರಿಣಾಮಕಾರಿಯಾಗಿರುತ್ತೆ.
ಈರುಳ್ಳಿ: ನಮ್ಮ ಕೂದಲಿಗೆ ಈರುಳ್ಳಿಯೊಂದು ಪರಿಣಾಮಕಾರಿ ಪದಾರ್ಥ, ಈರುಳ್ಳಿ ರಸವನ್ನು ತೆಗೆದು ಕೂದಲಿನ ಬುಡಕ್ಕೆ ಹಚ್ಚುವುದರಿಂದ ನಮ್ಮ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಬಾದಾಮಿ ಆಯಿಲ್: ಲಿಂಬೆ ರಸ, ನೆಲ್ಲಿಕಾಯಿ ಹಾಗೂ ಬಾದಾಮಿ ಎಣ್ಣೆಯನ್ನು ಬಿಸಿ ಮಾಡದೆ ಮಿಶ್ರಣ ಮಾಡಿ, ಕೂದಲಿನ ಬುಡಕ್ಕೆ ಗ್ಚ್ಉವುದರಿಂದ ಕೂದಲು ಕಪ್ಪಾಗುತ್ತದೆ.