ಸತತ ಎರಡು ಪರೀಕ್ಷೆಗೆ ಗೈರು: ಮನವೊಲಿಸಿ ಮತ್ತೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು

0
70

ಧಾರವಾಡ: ಸತತ ಎರಡು ಪರೀಕ್ಷೆಗೆ ಗೈರಾದ ಕೆಎನ್‌ಕೆ ಶಾಲೆಯ ವಿದ್ಯಾರ್ಥಿನಿ ತಬಸೂಮ್ ಅವರ ಮನೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ಹಂಚಾಟೆ ಖುದ್ದಾಗಿ ಬಾಲಕಿಯ ಪಾಲಕರ ಮನವೊಲಿಸಿ ಸೋಮವಾರ ನಡೆದ ವಿಜ್ಞಾನ ಪರೀಕ್ಷೆಗೆ ಹಾಜರಾಗಲು ಧೈರ್ಯ ತುಂಬುವ ಮೂಲಕ ಪರೀಕ್ಷಾ ಕೇಂದ್ರ ಕರ್ನಾಟಕ ಪ್ರೌಢ ಶಾಲೆಯಲ್ಲಿ ಮಗುವಿಗೆ ಪುಷ್ಪ ನೀಡಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು.
ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ.ಅಡಿವೇರ, ಬಿಆರ್‌ಪಿ ಫಿರೋಜ ಗುಡೇನಕಟ್ಟಿ, ಪೊಲೀಸ್ ಅನೀಲ ಕೋತ್ ಅವರನ್ನು ಪರೀಕ್ಷಾ ಕೇಂದ್ರ ಕರ್ನಾಟಕ ಪ್ರೌಢ ಶಾಲೆಯ ಮುಖ್ಯ ಅಧೀಕ್ಷಕ ಸವಣೂರರವರಿಗೆ ಭೇಟಿ ಮಾಡಿಸಿ, ಮಗುವಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನ್ ಮಾಡಿಸಿ, ನಿಗದಿತ ಕೊಠಡಿಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿಸಿದರು.
ಎರಡನೇ ತಂಡದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ನೇತೃತ್ವದಲ್ಲಿ ಜಿಎಚ್‌ಎಸ್ ಕೋಟೂರಿನ ರೇವಣ್ಣ ಹರಿಜನ ಮತ್ತು ಅಳ್ನಾವರದ ಮಿಲತ್ ಪ್ರೌಢಶಾಲೆಯ ವಿದ್ಯಾವತಿ ಕುರುಬೆಟ್ಟ ಅವರನ್ನು ನಿಗದಿತ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆಗೆ ಬರೆಯಲು ಅವಕಾಶ ಕಲ್ಪಿಸಿದರು.
ಜಿಲ್ಲೆಯಲ್ಲಿ ಯಾವುದೇ ಮಗು ಪರೀಕ್ಷೆಯಿಂದ ವಂಚಿತವಾಗದ0ತೆ ಗೈರಾದ ಮಕ್ಕಳ ಮನವೊಲಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಉಪನಿರ್ದೇಶಕರು ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here