Monday, August 8, 2022

Latest Posts

ಸತತ ಸುರಿದ ಮಳೆ : ಕೈ ಕೊಟ್ಟ ಹೆಸರು ಬೆಳೆ, ಕಂಗಾಲಾದ ಅನ್ನದಾತ!

ಯಾದಗಿರಿ : ಈ ಸಲ ಉತ್ತಮ ಹೆಸರು ಬರುತ್ತದೆ ಎಂದು ನಂಬಿದ್ದೇವು. ಆದರೆ ಸತತ ಮಳೆ ಸುರಿದ ಪ್ರಯುಕ್ತ ತೇವಾಂಶದಿoದ ಹೆಸರು ಬೆಳೆ ಹಾಳಾಗಿ ಇವತ್ತು ಸಾಲ ಸೂಲಕ್ಕೆ ಒಳಗಾಗಿದ್ದೇವೆ ಎಂದು ಅನ್ನದಾತರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಜಿಲ್ಲೆಯ ಹೆಸರಿಗೆ ಬೇರೆ ರಾಜ್ಯದಲ್ಲಿ ಅಪಾರ ಬೇಡಿಕೆಯ ಹಿನ್ನಲೆಯಲ್ಲಿ ಹಾಗೂ 40 ದಿನಗಳಲ್ಲಿ ಬರುವ ಈ ಹಸೆರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತಿತ್ತು. ಇದರಿಂದಾಗಿ ರೈತರು ಒಂದು ವರ್ಷದ ಕೃಷಿಗೆ ಬೇಕಾದ ಆರ್ಥಿಕ ನೆರವು ಸಿಗುತಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಉತ್ತಮ ಬೆಳೆ ಬಂದಿದ್ದಿಲ್ಲ. ಆದರೆ ಈ ವರ್ಷ ಬಂಪರ ಬೆಲೆ ಬರುವ ನಿರೀಕ್ಷೆಯಲ್ಲಿದ್ದ ಅನ್ನದಾತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ ಈ ಬಾರಿ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದ ಕಾರಣ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಸಂಪೂರ್ಣ ಬೆಳೆ ಹಾನಿಯಾಗಿ 10-20 ಕ್ಷಿಂಟಾಲ ಬೆಳೆಯ ಬದಲಿಗೆ ಕೇವಲ ಒಂದೆರಡು ಕ್ಷಿಂಟಾಲ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಯಾವುದೇ ಬೆಲೆ ಸಿಗದೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇನ್ನೇನು ರಾಶಿ ಮಾಡುಬೇಕು ಅನ್ನುವಷ್ಠರಲ್ಲಿ ಜಿಲ್ಲೆಯಲ್ಲಿ ಸತತ ಮಳೆ ಬಿದ್ದ ಕಾರಣ ಹೆಸರೆಲ್ಲ ಜಮೀನಿನಲ್ಲಿ ಮೊಳಕೆ ಹೊಡೆದಿದೆ. ಇನ್ನು ಕೆಲವು ಜಮೀನಿನಲ್ಲಿ ಬೂಳಸು ಬಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕನಿಷ್ಠ 3000 ಸಾವಿರದಿಂದ 6500 ಸಾವಿರ ಇದ್ದು, ಆ ಬೆಲೆ ಸಿಗುವ ಸಾಧ್ಯತೆ ಇಲ್ಲದಂತಾಗಿದೆ.
ಪ್ರತಿಯೊಬ್ಬ ರೈತ ಕನಿಷ್ಠ 15 ರಿಂದ 20 ಸಾವಿರ ಸಾಲ ಮಾಡಿ ಬೀಜ ಮತ್ತು ರಸಗೊಬ್ಬರ ತಂದು ಬಿತ್ತನೆ ಮಾಡಲಾಗಿದೆ. ಆದರೆ ಇವತ್ತು ಹೆಸರು ಬಿಡಿಸುವ ಕೂಲಿ ಕಾರ್ಮಿಕರಿಗೂ ನೀಡಲಾಗುತ್ತಿಲ್ಲ. ಇನ್ನೂ ಕೆಲವು ರೈತರು ಹೆಸರನ್ನು ಬಿಡಿಸದೆ ಹೊಲದಲ್ಲಿಯೇ ಬಿಟ್ಟು ಮುಂದಿನ ಜೋಳ ಬಿತ್ತನೆಗೆ ಹಸನ ಮಾಡಿಕೊಂಡಿದ್ದಾರೆ.
ಒಟ್ಟಾರೆ ಜಿಲ್ಲೆಯ ರೈತರು ಕೈಜೊಟ್ಟ ಹೆಸರಿನಿಂದ ಹೊರಬಂದು ಮುಂದಿನ ದಿನಗಳಲ್ಲಿ ಉತ್ತಮ ಬೆಳೆಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಅಲ್ಲದೆ ಕಳೆದ ಸಾಲಿನಲ್ಲಿ ಹಾನಿಗೊಳಗಾದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗಲಾದರೂ ಸರಕಾರ ಕೂಡಲೆ ಹಾನಿಗೊಳಗಾದ ಬೆಳೆಯ ಸಂಇಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂಬುದು ರೈತರ ಆಗ್ರಹವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss