Wednesday, August 10, 2022

Latest Posts

ಸತೀಶ್ ನೀನಾಸಂ- ವಿಜಯ್ ಪ್ರಸಾದ್ ಕಾಂಬಿನೇಷನಲ್ಲಿ ಮತ್ತೊಂದು ಹೊಸ ಸಿನಿಮಾ, ಯಾವುದು ಗೊತ್ತಾ?

ಈಗಾಗಲೇ ಸತೀಶ್ ನೀನಾಸಂ ಮತ್ತು ’ಸಿದ್ಲಿಂಗು’ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ. ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು ಮಾಡಿದ್ದಾರೆ. ಕಥೆ-ಚಿತ್ರಕಥೆ ಎಲ್ಲ ಸಿದ್ದ ಮಾಡಿಕೊಂಡಿರುವ ಸ್ಟಾರ್ ಜೋಡಿ ಅಕ್ಟೋಬರ್ ತಿಂಗಳಿನಿಂದ ಶೂಟಿಂಗ್ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಸತೀಶ್ ನೀನಾಸಂ ಮತ್ತು ವಿಜಯ್ ಪ್ರಸಾದ್ ಬಹಳ ವರ್ಷಗಳಿಂದ ಸ್ನೇಹಿತರು. ಒಟ್ಟಿಗೆ ಸಿನಿಮಾ ಮಾಡುವ ಪ್ರಯತ್ನಗಳು ಲ ಕೊಡಲಿಲ್ಲ. ಇದೀಗ, ಅಂತಿಮವಾಗಿ ಹೊಸ ಸಿನಿಮಾ ಮಾಡಲು ಸಜ್ಜಾಗಿದ್ದು, ಲಾಕ್ಡೌನ್ ಸಮಯದಲ್ಲಿ ಎಲ್ಲವೂ ಪ್ಲಾನ್ ಮಾಡಿ ಮುಗಿಸಿದ್ದಾರೆ. ಮುಂದಿನ ತಿಂಗಳಿನಿಂದಲೇ ಚಿತ್ರೀಕರಣ ಆರಂಭಿಸುವ ಸಾ ಧ್ಯತೆ ಇದೆ.

ಸಿದ್ಲಿಂಗು, ನೀರ್ದೋಸೆ ಚಿತ್ರಗಳ ಯಶಸ್ಸಿನ ಬಳಿಕ ವಿಜಯ್ ಪ್ರಸಾದ್ ತೋತಾಪುರಿ ಸಿನಿಮಾ ಮಾಡಿದ್ದಾರೆ. ಜಗ್ಗೇಶ್, ಅದಿತಿ ಪ್ರ ಭುದೇವ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಯಾಗಬೇಕಿದೆ. ಅಷ್ಟರಲ್ಲೇ ಸತೀಶ್ ನೀನಾಸಂ ಚಿತ್ರಕ್ಕೆ ವಿಜಯ್ ಪ್ರಸಾದ್ ಕೈ ಜೋಡಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss