ಚೆನ್ನೈ: ಗಾಯಕ ಎಸ್ಪಿ ಬಾಲ ಸುಬ್ರಹ್ಮಣ್ಯಂ ಇಂದು ವಿದಿವಶರಾಗಿದ್ದಾರೆ. ಇದೀಗ ಅವರ ಪಾರ್ಥಿವ ಶರೀರ ಎಂಜಿಎಂ ಆಸ್ಪತ್ರೆಯಿಂದ ನುಂಗಂಬಾಕಂನಲ್ಲಿರುವ ನಿವಾಸಕ್ಕೆ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗುತ್ತಿದೆ. ನಂತರ ಚೆನ್ನೈ ನ ಸತ್ಯಂ ಥಿಯೇಟರ್ನಲ್ಲಿ ಎಸ್ಪಿ ಬಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ ೧೦ ಗಂಟೆಗೆ ಬಾಲಸುಬ್ರಹ್ಮಣ್ಯಂ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.