ಹಿಂದೂಗಳು ಸಲ್ಲಿಸುವ ಪೂಜೆಗಳಲ್ಲಿ ಸತ್ಯನಾರಾಯಣ ಪೂಜೆಗೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ಸತ್ಯನಾರಾಯಣ ಎಂದರೆ ನಂಬಿಕೆಯ ಸಾಕಾರರೂಪ. ಹಾಗಾಗಿ ಬಹಳ ಶ್ರದ್ಧೆ, ಭಕ್ತಿಯಿಂದ ಪೂಜೆ ಮಾಡುತ್ತಾರೆ. ಈ ಪೂಜೆಗೆ ತಯಾರಿಸುವ ಪ್ರಸಾದವನ್ನೂ ಸ ಅಷ್ಟೇ ಭಕ್ತಿ, ಮಡಿಯಿಂದ ತಯಾರಿಸುತ್ತಾg. ತುಂಬಾ ಜನಕ್ಕೆ ಹೇಗೆ ಪ್ರಸಾದ ತಯಾರಿಸುವುದು ಎಂಬುದೇ ಗೊತ್ತಿಲ್ಲ. ತುಂಬಾ ಸರಳವಾಗಿ ತಯಾರಿಸಬಹುದು ಇಲ್ಲಿದೆ ನೋಡಿ
ಬೇಕಾಗುವ ಸಾಮಗ್ರಿ:
ಗೋಧಿ ರವೆ\ ಗೋಧಿ ಹಿಟ್ಟು
ಸಕ್ಕರೆ
ತುಪ್ಪ
ಹಾಲು
ಬಾಳೆಹಣ್ಣು
ಮಾಡುವ ವಿಧಾನ:
ಗೋಧಿ ರವೆ ಅಥವಾ ಗೋಧಿ ಹಿಟ್ಟು ಎರಡರಿಂದಲೂ ಇದನ್ನು ತಯಾರಿಸಬಹುದು. ರವಾವನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ತುಪ್ಪವನ್ನು ರವೆ ನೆನಯುವಷ್ಟು ಹಾಕಿ ಚೆನ್ನಾಗಿ ಪರಿಮಳ ಬರುವವರೆಗೂ ಹುರಿಯಬೇಕು. ನಂತರ ಅದಕ್ಕೆ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕುದಿಸ ಬೇಕು. ಉಪ್ಪಿಟ್ಟಿನ ಹದಕ್ಕೆ ಬಂದ ನಂತರ ಬಾಳೆಹಣ್ಣನ್ನು ಕೈಯಿಂದ ಕಿವುಚಿ ಹಾಕಿ ಒಲೆಯಿಂದ ಇಳಿಸಿಡಬೇಕು. ಪೂಜೆ ಇಲ್ಲದಿದ್ದರೂ ನೀವು ಇದನ್ನು ಮಾಡಿಕೊಂಡು ತಿನ್ನಬಹುದು ಆದರೆ ಹಾಗೇ ಮಾಡಿಕೊಂಡು ತಿನ್ನುವುದಾದರೆ ಬಾಳೆಹಣ್ಣನ್ನು ಹಾಕಿಕೊಳ್ಳಬೇಡಿ. ಶಾಸ್ತ್ರದ ಪ್ರಕಾರ ಪೂಜೆ ಪ್ರಸಾದಕ್ಕೆ ಮಾತ್ರ ಬಾಳೆಹಣ್ಣನ್ನು ಹಾಕಬೇಕು.