spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸತ್ಸಂಗದಿಂದ ಜೀವನದಲ್ಲಿ ನೆಮ್ಮದಿ: ಕಡಗಂಚಿ ಶ್ರೀಗಳು

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಕಲಬುರಗಿ ವರದಿ:

ಮನುಷ್ಯನ ಜೀವನದಲಿ ಸತ್ಸಂಗದಿಂದ ನೆಮ್ಮದಿ ಕಾಣಲು ಸಾಧ್ಯ ಮನುಷ್ಯ ಧರ್ಮ
ಕಾರ್ಯಗಳಿಂದಲೇ ಮುಕ್ತಿ ಹೊಂದಲು ಸಾಧ್ಯ. ಇದರಿಂದ ಸುಖ, ಶಾಂತಿ, ನೆಮ್ಮದಿ ಕಾಣಲು
ಸಾಧ್ಯವೆಂದು ಶ್ರೀ ಶಾಂತಲಿಂಗೇಶ್ವರ ಸಂಸ್ಥಾನ ಮಠ ಕಡಗಂಚಿಯ ಪೂಜ್ಯ ಶ್ರೀ ವಿರಭದ್ರ
ಶಿವಾಚಾರ್ಯರು ಭಕ್ತರನ್ನು ಉದ್ದೇಶಿಸಿ ಆರ್ಶಿವಚನ ನೀಡಿದರು.

ಅವರು ಕಲಬುರಗಿ ನಗರದ ಗಂಜಬ್ಯಾಂಕ ಕಾಲೋನಿಯಲ್ಲಿರು ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡ ಶ್ರೀಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ(ರಿ) ಕೆಂದ್ರ ಸಮಿತಿ ಕಲಬುರಗಿಯವರು ಹಮ್ಮಿಕೊಂಡ ಶ್ರಾವಣ ಮಾಸದ ನಿಮಿತ್ಯವಾಗಿ ಶಿವಭಕ್ತರ ಮನೆ ಮನೆಗೆ ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನ ಜ್ಯೋತಿ ಕಾರ್ಯಕ್ರಮದ ಮಹಾಮಂಗಲ ಹಾಗೂ ಶ್ರೀ ಸಿದ್ದಾನಂದ ಶಿವಯೋಗಿಗಳ ಶ್ರಾವಣ ಮಾಸದ 1
ತಿಂಗಳದ ಅನುಷ್ಠಾನ ಮಹಾಮಂಗಲ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು.

ಶ್ರೀ ಸಿದ್ದಾನಂದ ಶಿವಯೋಗಿಗಳ 24ನೇ ಅನುಷ್ಠಾನ ಬಹಳ ಚನ್ನಾಗಿ ನಡೆಸಿ ಕೊಟ್ಟರು. ಇದಕ್ಕೆಲ ಭಕ್ತರ
ಸಹಕಾರ ಮುಖ್ಯ ಇಂತಹ ಇಳಿವಯಸ್ಸಿನಲ್ಲಿ ಅವರ ಅನುಷ್ಠನ ಮಾಡಿದನ್ನು ನೋಡಿದರೆ
ನಿಜವಾಗಿಯೂ ನಮ್ಮ ನಿಮ್ಮೆಲ್ಲರಿಗೆ ಬಹಳ ಸಂತೋಷವಾಯಿತು. ಭಕ್ತರ ಮನ ಶುದ್ಧ ತನು ಶುದ್ಧ ಕ್ರಿಯೆ
ಶುದ್ಧ ಇರಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ಸರಡಿಗಿಯ ಪೂಜ್ಯಶ್ರೀ ರೇವಣಸಿದ್ದ
ಶೀವಾಚಾರ್ಯರು ಭಕ್ತರನ್ನು ಉದ್ದೇಶಿಸಿ ಆರ್ಶಿವಚನ ನೀಡುತಾ ್ತ ಶ್ರಾವಣ ಮಾಸದಲ್ಲಿ ಹಮ್ಮಿಕೊಂಡ
ಶ್ರೀ ಸಿದ್ದಾನಂದ ಶಿವಯೋಗಿಗಳ ಮೌನಾನುಷ್ಠಾನದಿಂದ ಈ ಹರಡಿರುವ ಮಹಾಮಾರಿ ಕೊರೊನಾ
ಅತಿ ವೇಗ ದುರವಾಗಲಿ ಜನ ಬದುಕಲಿ ಜಗತ್ತು ಬದುಕಲೆಂದು ಅವರು ತಿಳಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss