Thursday, June 30, 2022

Latest Posts

ಸದ್ದಿಲ್ಲದೇ ನಡೆದ ಬ್ಯಾರಿಕೇಡ ತೆರವು: ಬಾಗಲಕೋಟೆ ಮಾರುಕಟ್ಟೆ ಆರಂಭವಾಗುವ ಮುನ್ಸೂಚನೆ?

ಜಗದೀಶ ಎಂ.ಗಾಣಿಗೇರ
ಬಾಗಲಕೋಟೆ: ಕಳೆದ ಮಾರ್ಚ್ ತಿಂಗಳಿಂದ ನಗರದ ಬಹುತೇಕ ಕಡೆ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.ಇದಲ್ಲದೇ ಜನಸಂಚಾರವನ್ನು ಸಹ ನಿರ್ಬಂಧಿಸಲಾಗಿತ್ತು.ಶುಕ್ರವಾರ ಮಧ್ಯಾಹ್ನದಿಂದ ಬ್ಯಾರಿಕೇಡ್ ತೆರವು ಕಾರ್ಯ ಸದ್ದಿಲ್ಲದೇ ಭರದಿಂದ ಸಾಗಿದೆ.
ಜಿಲ್ಲೆಯಲ್ಲೇ ಮೊದಲ ಕೊರೋನಾ ಸೋಂಕು ಹಳೆ ಬಾಗಲಕೋಟೆಯಲ್ಲಿ ದೃಢಪಟ್ಟ ನಂತರ ನಗರವನ್ನು ಸಂಪೂರ್ಣ ಸೀಲ್ಡೌನ್ ಮಾದರಿಯಲ್ಲಿ ಲಾಕ್ ಮಾಡಲಾಗಿತ್ತು.ಮೇ 4ರ ನಂತರ ಆರಂಜ್ ವಲಯ ಹಾಗೂ ಗ್ರೀನ್ ವಲಯದಲ್ಲಿ ಕೆಲವೊಂದು ವಿನಾಯಿತಿ  ನೀಡಿದಾಗ ಇದರಲ್ಲಿ ಬಾಗಲಕೋಟೆಯೂ ವಿನಾಯಿತಿ ಪಡೆದುಕೊಂಡಿತ್ತು.
ಆರಂಜ್ ವಲಯದಲ್ಲಿ ಏನೇನು ಇರಬೇಕು ಏನು ಇರಬಾರದು ಎಂಬ ಷರತ್ತುಗಳೊಂದಿಗೆ ಜಿಲ್ಲಾಡಳಿತ ಕೆಲವೊಂದು ನಿಯಮಗಳನ್ನು ಅನುಷ್ಠಾನಕ್ಕೆ ತರುವಮೂಲಕ ಜನರಿಗೆ ಅನುಕೂಲವಾಗುವಂತೆ ಲಾಕ್ಡೌನ್ ಸಡಿಲಗೊಳಿಸಲಾಗಿತ್ತು ಆದರೆ ಕಿರಾಣಿ,ತರಕಾರಿ,ಔಷಧ ಮತ್ತು ಹಾಲು ಪೂರೈಕೆಯಲ್ಲಿ ಜನರಿಗೆ ತೊಂದರೆ ಆಗದಂತೆ ಲಾಕ್ಡೌನ್ ಸಡಿಲಗೊಳಿಸಿದ ನಂತರ ಜನರು ಸ್ವಲ್ಪ ನಿರಾಳಾಗಿದ್ದಾರೆ.
ಈಗ ನಗರ,ನವನಗರ ಮತ್ತು ವಿದ್ಯಾಗಿರಿಯ ಪ್ರಮುಖ ರಸ್ತೆಗಳಲ್ಲಿ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದನ್ನು ತೆರವುಗೊಳಿಸುವ ಕಾರ್ಯವನ್ನು ನಗರಸಭೆ ಪೌರ ಕಾರ್ಮಿಕ ರು ಚುರುಕಿನಿಂದ ಮಾಡುತ್ತಿದ್ದಾರೆ. ನಗರದ ರೈಲ್ವೆ ಬ್ರಿಡ್ಜ್ದಿಂದ ಬಾದಾಮಿ ರಸ್ತೆಗೆ ಹೋಗುವ ವೃತ್ತದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು ಇದನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಇದಲ್ಲದೇ ವಿದ್ಯಾಗಿರಿಯ ಬಸವೇಶ್ವರ ಎಂಜನೀಯರಿಂಗ್ ಕಾಲೇಜ್ ವೃತ್ತ, ಧನುಷ್ಯ ಆಸ್ಪತ್ರೆಯಿಂದ ವಾಸವಿ ಚಿತ್ರಮಂದಿರಕ್ಕೆ ಹೋಗುವ ಮಾರ್ಗ,ಹಳೆಯ ವಿಜಯ ಮೋಟರ್ಸ್,ಬಸ್ ನಿಲ್ದಾಣ ರಸ್ತೆ ಸೇರಿದಂತೆ ಇನ್ನಿತರ ಕಡೆ ಹೋಗುವ ರಸ್ತೆಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ತೆಗೆದುಕೊಂಡು ಟ್ರ್ಯಾಕ್ಟರ ಮೂಲಕ ಮೊದಲಿದ್ದ ಸ್ಥಳಕ್ಕೆ ರವಾನಿಸುವ ಕಾರ್ಯ ನಡೆದಿದೆ. ಇನ್ನೂ ಶಿರೂರ ಗೇಟ್ದಿಂದ ಗದ್ದನಕೇರಿ ಕ್ರಾಸ್ ಕಡೆ ಹೋಗುವ ರಸ್ತೆಗಳನ್ನು ಖುಲ್ಲಾ ಮಾಡಿರುವುದಿಲ್ಲ.ಇನ್ನೆರಡು ದಿನದಲ್ಲಿ ಇವು ಖುಲ್ಲಾ ಆಗುವ ಸಾಧ್ಯತೆ ಇದೆ.ಈಗಾಗಲೇ ನಗರದಲ್ಲಿ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ತೆರವುಗೊಳಿಸಿ ಆರಂಭಿಸುತ್ತಿದ್ದಂತೆ ಜನರು ಭಯಭೀತಿಯಲ್ಲದೇ ಸಂಚಾರ ಮಾಡಲು ಆರಂಭಿಸಿದ್ದಾರೆ. ಇನ್ನೂ ಮಧ್ಯಾಹ್ನದಿಂದ ಅಲ್ಲಲ್ಲಿ ಮೊಬೈಲ್ ಶಾಫ್,ಬಟ್ಟೆ ಅಂಗಡಿಗಳನ್ನು ತೆಗೆದು ಸ್ವಚ್ಛತೆ ಮಾಡುವಲ್ಲಿ ನಿರತರಾಗಿದ್ದಾರೆ.
ಸಾಮಾಜಿಕ ಅಂತರ ಮುಖ್ಯ  
ನಗರದಲ್ಲಿ ಜನರಿಗೆ ಉಪಯುಕ್ತವಾಗಲಿ ಎಂದು ಜಿಲ್ಲಾಡಳಿತ ನಿಯಮಗಳನ್ನು ಸಡಿಲಿಗೊಳಿಸುತ್ತಿದೆ ಆದರೆ ಜನರು ಇದನ್ನು ದುರುಪಯೋಗಪಡಿಸಿಕೊಂಡರೇ ಜೀವಕ್ಕೆಕುತ್ತು ಬರುವ ಸಾಧ್ಯತೆ. ಲಾಕ್ಡೌನ್ ಸಡಿಲವಾಗಿರಬಹುದು ಆದರೆ ಕೊರೋನಾಕ್ಕೆ ಸಡಿಲವಾಗಿಲ್ಲ.ಇದನ್ನು ಗಮನದಲ್ಲಿಟ್ಟುಕೊಂಡು ಅವಶ್ಯವಿದ್ದರೆ ಮಾತ್ರ ಜನರು ಹೊರಗಡೆ ಬರುವುದನ್ನು ಕಲಿಯಬೇಕು.ರಸ್ತೆಗಳು ಖುಲ್ಲಾ ಆಗಿದೆ ಎಂದು ಎಲ್ಲೆಂದರಲ್ಲಿ ಓಡಾಡುವುದನ್ನು ಇನ್ನೂ ಕೈಬಿಟ್ಟರೆ ಉತ್ತಮ.
ನಗರದಲ್ಲಿ ಲಾಕ್ಡೌನ್ ಆದ ಬಳಿಕ ಹಳೆ ಬಾಗಲಕೋಟೆಯ ಮಾರುಕಟ್ಟೆಯಲ್ಲಿ  ವ್ಯಾಪಾರ ಸಂಪೂರ್ಣ ಸ್ಥಗಿತವಾಗಿದೆ.ಇದರಿಂದ ವ್ಯಾಪಾರಸ್ಥರಿಗೂ ತುಂಬಾ ಹಾನಿಯಾಗಿದೆ.ಇದಲ್ಲದೇ ಎಲ್ಲರಿಗೂ ಅನುಕೂಲವಾಗಲಿದೆ.ಆದರೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮಾರುಕಟ್ಟೆಯಲ್ಲಿ ಹೆಜ್ಜೆ ಇಡಬೇಕು.ಎಲ್ಲವೂ ಜಿಲ್ಲಾಡಳಿತ ಮಾಡಲಿದೆ ಎಂದು ಹೇಳಿದರೆ ಆಗುವುದಿಲ್ಲ.ಮಾರುಕಟ್ಟೆ ಆರಂಭವಾಗಿದೆ,ರಸ್ತೆ ಖುಲ್ಲಾ ಆಗಿದೆ ಅಂಗಡಿಗಳು ಓಪನ್ ಆಗಿದೆ,ಇನ್ನೇನು ಯಾವಾಗ ಮತ್ತೇ ಬಂದ್ ಆಗುತ್ತದೆ ಎಂದು ಆತುರದಲ್ಲಿ ಜನ ಒಮ್ಮೆಲೇ ಗುಂಪಾಗಿ ಅಂಗಡಿಗಳ ಮುಂದೆ ಸೇರುವುದನ್ನು ಕಡಿಮೆ ಮಾಡಬೇಕು.ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಮುಖವಾಗಿದೆ.
ಮಾರುಕಟ್ಟೆ ಆರಂಭವಾಗುವ ಮುನ್ಸೂಚನೆ  
ಕಳೆದ ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ನಗರದಲ್ಲಿ ಮಾರುಕಟ್ಟೆ ಸ್ಥಗಿತವಾಗಿದ್ದು ಶುಕ್ರವಾರ ಶಾಸಕ ವೀರಣ್ಣ ಚರಂತಿಮಠವರು ನಗರದಲ್ಲಿ ಸಂಚಾರ ನಡೆಸಿ ವ್ಯಾಪಾರಸ್ಥರು ಹಾಗೂ ಜನರಿಗೆ ಅಲ್ಲಲ್ಲಿ ಅಹವಾಲು ಕೇಳಿದರು.ಈ ಸಂದರ್ಭದಲ್ಲಿ ಎಲ್ಲರ ಸಮಸ್ಯೆಗೆ ಸ್ಪಂದಿಸುವ ಕೆಲಸ ಆಗಲಿದೆ ಎಂದರು. ಆದರೆ ಯಾವಾಗಿನಿಂದ ಮಾರುಕಟ್ಟೆ ಆರಂಭವಾಗಲಿದೆ ಎಂಬುದನ್ನು ಮಾತ್ರ ಇನ್ನೂ ಜಿಲ್ಲಾಡಳಿತ ಸ್ಪಷ್ಟಪಡಿಸಿಲ್ಲ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು 51 ಇದ್ದು ಇದರಲ್ಲಿ 17 ಜನರು ಗುಣಮುಖವಾಗಿದ್ದಾರೆ.ಈಗ ಬಾದಾಮಿ ತಾಲ್ಲೂಕಿನ ಡಾಣಕಶಿರೂರ ಗ್ರಾಮದಲ್ಲಿ ಕೊರೋನಾ ಸೋಂಕಿತರ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತಕ್ಕೆ  ಇದು ಸವಾಲಾಗಿ ಪರಿಣಮಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss