ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಸಿಎಂ ಗುಡ್ ನ್ಯೂಸ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಸದ್ಯದಲ್ಲಿಯೇ ಮೆಟ್ರೋ ಸೇವೆ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ ಬಿಎಸ್ವೈ ಕೊರೋನಾ ಎಫೆಕ್ಟ್ನಿಂದ ಹಂತಹಂತವಾಗಿ ಜನ ಜೀವನ ಸರಿಯಾಗುತ್ತಿದೆ. ಮುಂಜಾಗರೂಕತಾ ಕ್ರಮ ಕೈಗೊಂಡು ಶೀಘ್ರದಲ್ಲಿಯೇ ಮೆಟ್ರೋ ಸೇವೆ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಾರಿಗೆ ಸೇವೆ ಬಹುತೇಕ ಆರಂಭವಾಗಿದ್ದು, ಬೇರೆ ರಾಜ್ಯಗಳಿಗೂ ಬಸ್ ಸಂಚಾರ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಮೆಟ್ರೋ ಸೇವೆಯನ್ನೂ ಸದ್ಯದಲ್ಲಿಯೇ ಆರಂಭಿಸುವುದಾಗಿ ತಿಳಿಸಿದ್ದಾರೆ.