Sunday, March 7, 2021

Latest Posts

ಸನ್ನಿ ಲಿಯೋನ್ ಅವರ ವಿದೇಶಿ ಪ್ರವಾಸವನ್ನು ತಡೆಯಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಾರ್ಯಕ್ರಮಕ್ಕಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ವಿದೇಶಿ ಪ್ರವಾಸವನ್ನು ತಡೆಯಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್​ನ ಹೇಳಿದೆ. ಈ ಮೂಲಕ ವಿದೇಶಗಳಲ್ಲಿನ ಕಾರ್ಯಕ್ರಮಗಳಿಗೆ ಹೋಗುವ ಮುಂಚೆ ಸನ್ನಿ ಲಿಯೋನ್ ಅವರು ಹೈಕೋರ್ಟ್​ನ ಅನುಮತಿ ಪಡೆಯಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ.
ಬಾಲಿವುಡ್ ನಟಿ ವಿರುದ್ಧ ಪೆರ್ಂಬಾವೂರ್ ನಿವಾಸಿ ಶಿಯಾಸ್​ ಎಂಬುವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಠಾಣೆಯಲ್ಲಿ ಅವರ ವಿರುದ್ಧ ದೂರನ್ನು ಕೂಡ ನೀಡಿದ್ದರು.
ವಿದೇಶಗಳಿಗೆ ಪ್ರಯಾಣಿಸಲು ಸನ್ನಿ ನ್ಯಾಯಾಲಯದಿಂದ ಅನುಮತಿ ಪಡೆಯುವಂತೆ ಆದೇಶ ನೀಡಬೇಕೆಂದು ಶಿಯಾಸ್​ ನ್ಯಾಯಾಲಯವನ್ನು ಕೇಳಿಕೊಂಡಿದ್ದರು. ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿದ್ದು, ಲಿಯೋನ್ ಅವರ ಮುಂಗಡ ಜಾಮೀನು ಅರ್ಜಿಯನ್ನು ಮಾರ್ಚ್ 8ಕ್ಕೆ ಮುಂದೂಡಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss