ಅಹಮದಾಬಾದ್ (ಗುಜರಾತ್): ಮಾಲ್ಡೀವ್ಸ್ನ ಮಾಲೆಯಿಂದ ಹೊರಟಿದ್ದ ಸಮುದ್ರ ವಿಮಾನ (ಸೀ ಪ್ಲೇನ್) ಅಹಮದಾಬಾದ್ ಬಳಿಯ ಸಬರಮತಿ ಏರೋಡ್ರಮ್ಗೆ ಇಂದು ಆಗಮಿಸಿದ್ದು, ಅಕ್ಟೋಬರ್ 31ರಂದು ಪ್ರಧಾನಿ ಮೋದಿ ಈ ಸಮುದ್ರ ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.
ಈ ಸಮುದ್ರ ವಿಮಾನ ತಾಂತ್ರಿಕ ವಿಚಾರಕ್ಕೆ ಕೇರಳದ ಕೊಚ್ಚಿಯ ವೆಂಡುರ್ತಿ ಕಾಲುವೆಯಲ್ಲಿ ಭಾನುವಾರ ಲ್ಯಾಂಡ್ ಆಗಿತ್ತು. ಬಳಿಕ ಅಲ್ಲಿಂದ ಈಗ ಅಹಮದಾಬಾದ್ನ ಸಬರಮತಿಗೆ ಬಂದು ತಲುಪಿದೆ.
19 ಆಸನಗಳನ್ನು ಹೊಂದಿದ ಈ ಸಮುದ್ರ ವಿಮಾನದಲ್ಲಿ 12 ಪ್ರಯಾಣಿಕರು ಪ್ರಯಾಣಿಸಬಹುದು ಎಂದು ದಕ್ಷಿಣ ನೌಕಾ ವಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈಗ ಸದ್ಯಕ್ಕೆ ಈ ವಿಮಾನ ಸಬರಮತಿ ನದಿಯಿಂದ ಕೆವಾಡಿಯಾದ ಬಳಿಯಿರುವ ಏಕತಾ ಪ್ರತಿಮೆಯ ಬಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಆಂತರಿಕ ಸಂಚಾರಿ ವಿಮಾನವಾಗಿ ಬಳಕೆಯಾಗಲಿದೆ.