Friday, July 1, 2022

Latest Posts

ಸಬ್ಸಿಡಿ ರಹಿತ ಎಲ್ ಪಿಜಿ ದರ ಹೆಚ್ಚಳ!!

ಹೊಸದಿಲ್ಲಿ: ದೇಶಾದ್ಯಂತ ಸಬ್ಸಿಡಿ ರಹಿತ ಅಡುಗೆ ಅನಿಲ(ಎಲ್ ಪಿಜಿ) ದರ ಪ್ರತಿ ಸಿಲಿಂಡರ್ ಗೆ 144.5ರೂ. ಏರಿಕೆಯಾಗಿದೆ.

ದೇಶದ ತೈಲ ಮಾರಾಟ ಸಂಸ್ಥೆಗಳು 14.2 ಕೆಜಿ ಸಿಲಿಂಡರ್ ಬೆಲೆಯನ್ನು 714ರೂ. ಯಿಂದ 252.50 ರೂ. ಗೆ ಹೆಚ್ಚಿಸಲು ಮುಂದಾಗಿವೆ. ಹೊಸ ದರಗಳು ಈಗಾಗಲೆ ಜಾರಿಗೆ ಬಂದಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ಈ ಕುರಿತು ಮಾಹಿತಿ ನೀಡಿದೆ.

2014ರ ಜನವರಿ ಬಳಿಕ ಇದು ಆರನೇ ಪರಿಷ್ಕೃತ ದರವಾಗಿದ್ದು, 19ಕೆಜಿಯ ಸಿಲಿಂಡರ್ ಗೂ 225 ರೂ. ಏರಿಕೆಯಾಗಿದೆ. ದಿಲ್ಲಿಯಲ್ಲಿ 1466 ರೂ. ಯಿಂದ 1540.50ಕ್ಕೆ ಹೆಚ್ಚಳವಾಗಿದೆ. ಮುಂಬೈಯಲ್ಲಿ 1190ರೂ ಯಿಂದ 1241 ರೂ ಗೆ ಏರಿಕೆಯಾಗಿದೆ.

ಗೃಹಬಳಕೆಗಿಲ್ಲ ಬೆಲೆ ಏರಕೆ ಬಿಸಿ: ತೈಲಮಾರಾಟ ಸಂಸ್ಥೆಗಳು ಗೃಹ ಬಳಕೆಯ ಸಿಲಿಂಡರ್ ಗಳನ್ನು ಮಾರುಕಟ್ಟೆಯ ದರದಲ್ಲಿ ಮಾರಾಟ ಮಾಡುತ್ತದೆ. ವಾರ್ಷಿಕ 12 ಎಲ್ ಪಿಜಿ ಸಿಲಿಂಡರ್ ಬಳಸುವ ಕುಟುಂಬಗಳಿಗೆ ಸರ್ಕಾರ ಸಬ್ಸಿಡಿ ಸೌಲಭ್ಯ ಒದಗಿಸಿದೆ.

ಸಾಮನ್ಯ ಗ್ರಾಹಕರು ಖರೀದಿಸುವ ಎಲ್ ಪಿಜಿ ಸಿಲಿಂಡರ್ ಗಳ ವೆಚ್ಚದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಸರ್ಕಾರ ನೀಡುವ ಸಬ್ಸಿಡಿ ಮೊತ್ತವನ್ನು ಪ್ರತಿ ಸಿಲಿಂಡರ್ ಗೆ 153.86 ರಿಂದ 291.48ಕ್ಕೆ ಹೆಚ್ಚಳಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss