ಮೈಸೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರೈತ ಸಂಘಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಘೇರಾವ್ ಹಾಕಿ, ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ ಘಟನೆ ಶನಿವಾರ ಮೈಸೂರಿನಲ್ಲಿ ನಡೆಯಿತು.
ನಗರದ ಗನ್ ಹೌಸ್ ವೃತ್ತದ ಶಂಕರಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆಗಮಿಸಿದರು. ಆಗ ಸ್ಥಳದಲ್ಲಿ ಜಮಾಯಿಸಿದ ರೈತರು, ಮುಖಂಡರುಗಳು ಕಾರಿನಿಂದ ಇಳಿದು ಸಮಸ್ಯೆ ಕೇಳಲು ಸಿದ್ದರಾದ ಸಚಿವರಿಗೆ ಘೇರಾವ್ ಮಾಡಿ, ಹಸಿರು ಟವಲ್ ಬೀಸುವ ಮೂಲಕ ಘೋಷಣೆಗಳನ್ನು ಕೂಗಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸರ್ಕಾರಿ ಸಂಸ್ಥೆಗಳನ್ನು, ನಿಗಮಗಳನ್ನೆಲ್ಲಾ ಖಾಸಗೀಕರಣ ಮಾಡುತ್ತಿದೆ. ಭೂ ಸೂಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳ್ಳವನಿಗೆ ಭೂಮಿ ನೀಡಲು ಹೊರಟಿದೆ. ಹಾಗಾದಾಗ ರೈತ ಎಲ್ಲಿಗೆ ಹೋಗಬೇಕು? ನಾವು ಹಲವಾರು ಬಾರಿ ಪ್ರತಿಭಟನೆಗಳನ್ನು ನಡೆಸಿದರೂ, ಸರ್ಕಾರ ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ, ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಸಮಸ್ಯೆಯನ್ನು ಆಲಿಸಿದ ಸಚಿವರು, ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಸೆ.೨೬ರಕ್ಕೆ ರೈತರ ಸಭೆ ನಿಗದಿಪಡಿಸಿದ್ದರೂ, ಇಂದು ಪ್ರತಿಭಟನೆ ಮಾಡಿರುವುದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸೆ.೨೬ಕ್ಕೆ ರೈತರ ಸಭೆ ಮಾಡೋಣ ಅಂತ ಹೇಳಿದ್ದೇವೆ. ಅಷ್ಟರೊಳಗೆ ಅವರು ಕಪ್ಪು ಬಾವುಟ ಪ್ರದರ್ಶನ ತೋರಿಸುವ ಕೆಲಸ ಮಾಡಿದ್ದಾರೆ. ಕಪ್ಪು ಬಾವುಟ ತೋರಿಸಿ, ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಿದ್ದರೆ ಈಡೇರಿಸಿಕೊಳ್ಳಲಿ ಏನೂ ತೊಂದರೆ ಇಲ್ಲ ಎಂದರು.
ರೈತರಿಗೆ ನೆರವಾಗುವ ಕೆಲಸವನ್ನು ಮಾಡುತ್ತಿದ್ದೇವೆ. ರಸಗೊಬ್ಬರ ಕೊರತೆಯಾಗಿದೆ ಎಂದು ಎಲ್ಲೂ ಒಂದೇ ಒಂದು ದೂರು ಇಲ್ಲ, ಕೇಂದ್ರದ ರಾಸಾಯನಿಕ ಗೊಬ್ಬರಗಳ ಸಚಿವ ಸದಾನಂದ ಗೌಡರು, ರೈತರಿಗೆ ಎಷ್ಟು ಬೇಕು ಅವೆಲ್ಲವನ್ನೂ ಕೊಟ್ಟಿದ್ದಾರೆ. ನಾನು ಕೂಡ ಮೈಸೂರಿಗೆ ಬಂದಾಗ ಕೃಷಿ ಸೇರಿದಂತೆ ಎಲ್ಲ ಇಲಾಖೆಗಳ ವಿಚಾರಣೆ ನಡೆಸಿದ್ದೇನೆ. ಯಾವ ಅಧಿಕಾರಿಯೂ ಕೂಡ ಒಂದೇ ಒಂದು ರಸಗೊಬ್ಬರ ಕೊರತೆ ಇದೆ ಎಂದು ಹೇಳಿಲ್ಲ. ಬೀಜದ ಕೊರತೆ ಇದೆ ಎಂದು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಿ ಎಲ್ಲಿಯೂ ರಸಗೊಬ್ಬರ ಕೊರತೆ ಇಲ್ಲ, ಬೀಜದ ಕೊರತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.ಕಪ್ಪು