ನಿದ್ದೆ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅನೇಕರು ತಮ್ಮ ಬಿಡುವಿನ ಸಮಯದಲ್ಲಿ ಹೆಚ್ಚು ನಿದ್ದೆ ಮಾಡುವುದನ್ನೇ ಮೈಗೂಡಿಸಿಕೊಂಡಿರುತ್ತಾರೆ. ಆದರೆ ದಿನಕ್ಕೆ ಅಗತ್ಯ ಸಮಯಕ್ಕಿಂತ ಹೆಚ್ಚು ನಿದ್ದೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೂ ತುತ್ತಾಗುವ ಸಾಧ್ಯತೆಗಳಿವೆ.
ಹೃದಯ ಸಮಸ್ಯೆ: ಜಾಸ್ತಿ ನಿದ್ದೆ ಮಾಡುವುದರಿಂದ ನಮ್ಮ ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಲಿದೆ. ಅತಿಯಾದ ನಿದ್ದೆಯು ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಇದೆ.
ಮಧುಮೇಹ: ಅತಿಯಾದ ನಿದ್ದೆಯಿಂದ ರಕ್ತದಲ್ಲಿ ಗ್ಲೂಕೋಸ್ ಅಂಶ ಹೆಚ್ಚಾಗಲಿದ್ದು, ಮಧುಮೇಹ ಸಮಸ್ಯೆ ಉಂಟಾಗುತ್ತದೆ.
ಮಾನಸಿಕ ಖಿನ್ನತೆ: ತುಂಬಾ ಹೊತ್ತು ನಿದ್ದೆ ಮಾಡುವುದರಿಂದ ಮನಸ್ಸಿಗೆ ಪರಿಣಾಮ ಬೀರುವುದರಿಂದ ಆಲಸ್ಯ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುವಿರಿ.
ಬೆನ್ನು ನೋವು: ಕುಳಿತು ಕೆಲಸ ಮಾಡುವವರಿಗೆ ಸಿಗುವ ಬಿಡುವಿನ ಸಮಯದಲ್ಲಿ ಹೆಚ್ಚು ನಿದ್ದೆ ಮಾಡುವುದರಿಂದ ಬೆನ್ನು ನೋವಿಗೆ ಕಾರಣವಾಗಬಹುದು.