Wednesday, July 6, 2022

Latest Posts

ಸಮಾಜಕ್ಕೆ ಮಾದರಿಯಾದ ವೀರಶೈವ ಸಮಾಜ ಅಖಂಡವಾಗಿರಲಿ : ಈಶ್ವರ ಖಂಡ್ರೆ

ಯಾದಗಿರಿ : ವೀರಶೈವ ಲಿಂಗಾಯತ ಸಮುದಾಯವು ಮೊದಲಿನಿಂದಲೂ ಎಲ್ಲಾ ಧರ್ಮ, ಜಾತಿ, ಜನಾಂಗದ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಾ ಬಂದಿದೆ. ಕಾರಣ ಸಮಾಜಕ್ಕೆ ಮಾದರಿಯಾದ ವೀರಶೈವ ಸಮಾಜ ಅಖಂಡವಾಗಿರಲಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆಯವರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಯಾದಗಿರಿ ಜಿಲ್ಲಾ ಅ.ಭಾ.ಜಿಲ್ಲಾ ವೀರಶೈವ ಮಹಾಸಭಾ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಜಗದ್ಗುರು ಪಂಚಪೀಠಾದೀಶ್ವರ ಮತ್ತು ಬಸವಾದಿ ಶರಣರ ಅನುಯಾಯಿಗಳು ಸಮಗ್ರ ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಗ್ಗಟಿನಿಂದ ನಡೆದುಕೊಳ್ಳಬೇಕು. ಒಳ ಪಂಗಡಗಳ ಬೇದ ಸಲ್ಲದು. ನಮ್ಮ ಸಮುದಾಯದ ಹಿರಿಯರು ಗುರಿಮುಟ್ಟಿ ಸಮಾಜಕ್ಕೆ ಗುರುವಾಗಿ ಬಾಳಿ ಆದರ್ಶವಾಗಿ ಬಾಳಿ ಬದುಕಿದ್ದಾರೆ. ಬಹುಕಾಲದ ಐತಿಹ್ಯವುಳ್ಳ, ಸಮಾಜಕ್ಕೆ ಮಾದರಿಯಾಗಿ ಬದುಕಿದ ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕೃತಿ, ಪರಂಪರೆಯನ್ನು ಮುಂದುವರೆಸಬೇಕಾದ ಗುರುತರ ಜವಾಬ್ದಾರಿ ಸಮುದಾಯದ ಯುವಕರ ಮೇಲೆ ಇದೆ ಎಂದರು.
ಈಗ ದೇಶ ಕರೋನಾ ಭೀತಿಯಿಂದ ಸಂಕಷ್ಟದಲ್ಲಿದೆ. ಕಷ್ಟದಲ್ಲಿರುವವರಿಗೆ ವೀರಶೈವ ಲಿಂಗಾಯತ ಸಮುದಾಯದಿಂದ ಸಹಾಯ ಮಾಡುವಂತದ್ದಾಗಬೇಕು. ವೀರಶೈವ ಲಿಂಗಾಯತರು ಯಾವತ್ತೂ ಕೊಡುಗೈ ದಾನಿಗಳು ಎಂಬುದನ್ನು ಮರೆಯಬಾರದು. ಒಗ್ಗಟ್ಟಿನೊಂದಿಗೆ ಸಮುದಾಯದ ಪೋಷಣೆಯ ಜೊತೆಗೆ ಇತರರಿಗೂ ನೆರವಾಗಿ ಇರಬೇಕು ಎಂದು ತಿಳಿಸಿದರು.
ಈಶ್ವರ ಖಂಡ್ರೆ ಅವರಿಗೆ ಅವರನ್ನು ಸೋಮಶೇಖರ ಮಣ್ಣೂರು ಮತ್ತು ತಂಡದವರಿAದ ಬಸವ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವೀರಣ್ಣ ರಾಖಾ, ಬಸವರಾಜ ರಾಜಾಪುರ, ಎಸ್. ಬಿ. ರಾಖಾ, ಡಾ. ಜಗದೀಶ್ ನೂಲಿನವರ, ಇಂದುಧÀರ ಶಿನ್ನೂರ , ಅವಿನಾಶ್ ಜಗನ್ನಾಥ ಮತ್ತು ಸಮಾಜದ ಯುವ ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss