Friday, July 1, 2022

Latest Posts

ಸಮಾನ‌ ವೇತನ ನೀಡುವಂತೆ ‌ವೈದ್ಯರ ಮನವಿ, ನಿರ್ಲಕ್ಷಿಸಿದರೆ ಆ.16ರಿಂದ ಕೋವಿಡ್ ವರದಿ ಸ್ಥಗಿತ ಎಚ್ಚರಿಕೆ

ಬಳ್ಳಾರಿ: ಜೀವದ‌ ಹಂಗನ್ನೇ ತೊರೆದು ಹಗಲಿರುಳು ರೋಗಿಗಳ ಸೇವೆ ಮಾಡುತ್ತಿರುವ ಸರ್ಕಾರಿ ವೈದ್ಯರ‌ ಸಮಾನ ಕೆಲಸಕ್ಕೆ ಸಮಾನ ವೇತನ ‌ನೀಡಬೇಕು ಎಂದು‌ ಒತ್ತಾಯಿಸಿ ಇಲ್ಲಿನ ಸರ್ಕಾರಿ‌ ವೈದ್ಯರು ಜಿಲ್ಲಾಧಿಕಾರಿಗಳವರ ಮೂಲಕ‌ ಸಿ.ಎಂ.ಯಡಿಯೂರಪ್ಪ ಅವರಿಗೆ ಮಂಗಳವಾರ ಮನವಿ‌ ರವಾನಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ‌ಕಚೇರಿ ಬಳಿ ಜಮಾಯಿಸಿದ ಸರ್ಕಾರಿ ವೈದ್ಯರು, ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸಬೇಕು, ಇತರೇ ರಾಜ್ಯಗಳಲ್ಲಿರುವ ವೈದ್ಯರಿಗಿರುವ ಸೌಲಭ್ಯಗಳು ನಮ್ಮ ರಾಜ್ಯದ‌ ವೈದ್ಯರಿಗೂ ಜಾರಿಯಾಗಬೇಕು ಸೇರಿದಂತೆ ವಿವಿಧ ‌ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಜಿಲ್ಲಾ‌ ಶಸ್ತ್ರ‌ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು‌ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸಬೇಕು, ವೈದ್ಯರಿಗೆ ಇತರೇ ರಾಜ್ಯಗಳಲ್ಲಿರುವ ಸೌಲಭ್ಯಗಳು ನಮ್ಮ‌ ರಾಜ್ಯದಲ್ಲೂ ಜಾರಿಯಾಗಬೇಕು ಎಂದು ಒತ್ತಾಯಿಸಿ ಕಳೆದ 6 ತಿಂಗಳಿಂದ ಸರ್ಕಾರಕ್ಕೆ ಮನವಿ ಮಾಡಿದರೂ ಇಲ್ಲಿವರೆಗೂ ‌ಕ್ರಮವಿಲ್ಲ. ನಮ್ಮ ಅನೇಕ ಅಗತ್ಯ ಬೇಡಿಕೆಗಳನ್ನು ಸರ್ಕಾರ ಪೂರೈಸಿಲ್ಲ. ಈ‌ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಿದಿಗಿಳಿಯಬೇಕಾಗಿದೆ ಎಂದರು. ಸರ್ಕಾರ ನಿರ್ಲಕ್ಷಿಸಿದರೆ ನಾಳೆಯಿಂದ ಜಿಲ್ಲೆಯಲ್ಲಿ ಕೊವೀಡ್ ವರದಿ‌ ನೀಡೋಲ್ಲ, ಈ ಕುರಿತು ಸಂಘದ ಸದಸ್ಯರು ತೀರ್ಮಾನಿಸಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ನೀತಿಯಂತೆ ಕರ್ನಾಟಕ ರಾಜ್ಯದಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆ ನೀಡುವಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೂ ವೇತನ ನೀಡಬೇಕು ಎಂದು ಆಗ್ರಹಿಸಿದರು. ದೇಶದ ಎಲ್ಲ ರಾಜ್ಯಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಕಾನೂನು ಜಾರಿಯಲ್ಲಿದೆ. ಆದರೇ, ರಾಜ್ಯದಲ್ಲಿ ಮಾತ್ರ ಜಾರಿ ಮಾಡಿಲ್ಲ. ಕೋವಿಡ್ ಸಮಯದಲ್ಲಿ ಜೀವವನ್ನು ಲೆಕ್ಕಿಸದೆ ಕೆಲಸ ಮಾಡಿದ್ದೇವೆ. ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ‌ಒತ್ತಾಯಿಸಿದರು. ಈ ಸಂದರ್ಭದಲ್ಲಿ ‌ವೈದ್ಯಕೀಯ ಸಂಘದ ಸದಸ್ಯರು ‌ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss