Monday, July 4, 2022

Latest Posts

ಸಮುದಾಯಕ್ಕೆ ಹರಡುತ್ತಿರುವ ಕೊರೋನಾ: ತಿರುವನಂತಪುರಂನ ಕರಾವಳಿ ಪ್ರದೇಶದಲ್ಲಿ 10 ದಿನ ಲಾಕ್ ಡೌನ್

ತಿರುವನಂತಪುರಂ: ತಿರುವನಂತಪುರಂನ ಕೆಲವೆಡೆ ಕೊರೋನಾ ವೈರಸ್ ಸಮುದಾಯ ಪ್ರಸರಣ ಆರಂಭವಾದ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ತಿರುವನಂತಪುರಂನ ಕರಾವಳಿ ಪ್ರದೇಶದಲ್ಲಿ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ 10 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ.
ಜಿಲ್ಲಾ ಆಡಳಿತ ಕರಾವಳಿ ಪ್ರದೇಶವನ್ನು ಕ್ರಿಟಿಕಲ್ ಕಂಟೈನ್ ಮೆಂಟ್ ಜೋನ್ ಎಂದು ಘೋಷಿಸಿದ್ದು, ಈ ಪ್ರದೇಶದಲ್ಲಿ ಜುಲೈ 18ರಿಂದ ಜುಲೈ 28ರ ವರೆಗೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿದೆ.
ಕೊರೋನಾ ವೈರಸ್ ಚೈನ್ ಬ್ರೇಕ್ ಮಾಡುವುದಕ್ಕಾಗಿ 10 ದಿನಗಳ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss