Sunday, June 26, 2022

Latest Posts

ಸಮ್ಮೇಳನದ ನಿರ್ಣಯಗಳ ಜಾರಿಗೆ ಹೋರಾಟ ಮಾಡಲೇಬೇಕು: ಎಚ್.ಎಸ್.ವೆಂಕಟೇಶಮೂರ್ತಿ

ಕಲಬುರಗಿ: ಸಮ್ಮೇಳನದ ನಿರ್ಣಯಗಳ ಜಾರಿಗೆ ನಾವು ಹೋರಾಟ ಮಾಡಲೇಬೇಕು ಎಂದು 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದರು.

ಮಂಗಳವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ ಎಚ್.ಎಸ್.ವಿ,ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಕಾಗದಕ್ಕೆ ಸೀಮಿತ ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, ಮಗು ಅಳದೆ ಹೋದರೆ ತಾಯಿ ಹಾಲು ಕೊಡುವುದಿಲ್ಲ. ನಾವು ಹೋರಾಟ ಮಾಡಲೇಬೇಕು. ಸರ್ಕಾರದ ಕಣ್ಣು ತೆರಸಲೇಬೇಕು. ಇಂದಲ್ಲ ನಾಳೆ ಸಮ್ಮೇಳನದ ನಿರ್ಣಯಗಳು ಜಾರಿಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಮತ್ತು ಅಖಂಡ ಕರ್ನಾಟಕದ ಜನರು ಸಮ್ಮೇಳನದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು. ಬೆಂಗಳೂರಿನ ಕಲಾಮಂದಿರಗಳಲ್ಲಿ ಮಕ್ಕಳಿಗೆ ಪ್ರವೇಶ ಇರುವುದಿಲ್ಲ. ಹೀಗಾಗಿ ಮಕ್ಕಳನ್ನು ಅಕ್ಕರದ ಜಾತ್ರೆಗೆ ಕರೆ ತನ್ನಿ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss