Wednesday, August 10, 2022

Latest Posts

ಸರಕಾರದಿಂದ ರೈತರಿಗೆ ಹೆಚ್ಚಿನ ಸಾಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ವಿಶ್ವದಲ್ಲಿ ಕೋವಿಡ್‌ದಿಂದಾಗಿ ಅನೇಕ ದೇಶಗಳು ಮತ್ತು ರಾಜ್ಯಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ ಸಹಕಾರಿ ಸಂಸ್ಥೆಯ ಮೂಲಕ ರಾಜ್ಯದ ರೈತರಿಗೆ ಹಿಂದಿಗಿಂತ ಈ ವರ್ಷ ಹೆಚ್ಚಿನ ಸಾಲವನ್ನು ನೀಡುವ ಮೂಲಕ ಸಹಕಾರಿ ರಂಗದ ಮಹತ್ವವನ್ನು ತಿಳಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಸಹಖಾರ ಇಲಾಖೆ, ಹಾವೇರಿ ಕೆ.ಸಿ.ಸಿ ಬ್ಯಾಂಕ್, ಧಾರವಾಡ ಕೆ.ಎಂ.ಎಫ್ ಹಾಗೂ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಚಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಏಳಿಗೆ ಬಗ್ಗೆ ಬದ್ಧತೆಯನ್ನು ಹೊಂದಿರುವುದರಿಂದಾಗಿ ಮತ್ತು ಸಹಕಾರಿ ಸಚಿವ ಎಸ್.ಟಿ.ಸೋಮಶೇಕರ ಅವರ ಪ್ರಯತ್ನದಿಂದ ಸಹಕಾರಿ ಸಂಸ್ಥೆಗಳ ಮೂಲಕ ಇಷ್ಟು ದೊಡ್ಡ ಪ್ರಮಾಣದಲ್ಲಿ ರೈತರಿಗೆ ಸಾಲವನ್ನು ನೀಡುವುದಕ್ಕೆ ಸಾದ್ಯವಾಗಿದೆ ಎಂದರು.
ಕೋವಿಡ್‌ನಿಂದಾದ ಲಾಕ್‌ಡೌನ ಸಂದರ್ಭದಲ್ಲಿ ಬೀದಿ ಬದಿಯ ವ್ಯಾಪಾರಸ್ತರಿಗೆ ೧೦ ಸಾವಿರ ರೂ, ಮತ್ತು ಕೊರೋನಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಕಾರಿ ಕ್ಷೇತ್ರದಿಂದ ೫೨ ಕೋ.ರೂಗಳನ್ನು ಸಚಿವ ಸೋಮಶೇಖರ ಅವರು ನೀಡಿದ್ದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವನ್ನು ನಿಜವಾಗಲು ಆರ್ಥಿಕ ಇಲಾಖೆಯಿಂದ ನೀಡಬೇಕಾಗಿತ್ತು ಆದರೆ ಸಹಕಾರ ಇಲಾಖೆಯಿಂದ ನೀಡುವ ಮೂಲಕ ಸಚಿವ ಎಸ್.ಟಿ.ಸೋಮಶೇಖರ ಅವರು ಸಹಕಾರ ರಂಗ ಎಷ್ಟು ಬಲಿಷ್ಟವಾದುದು ಎನ್ನುವುದನ್ನು ನಾಡಿಗೆ ತೋರಿಸಿಕೊಟ್ಟರು ಎಂದು ಹೇಳಿದರು.
ಕೋವಿಡ್ ಸಂದರ್ಭ ಆಶಾ ಕಾರ್ಯಕರ್ತೆಯರ ಕಾರ್ಯವನ್ನು ಸರ್ಕಾರ ಗಮನಿಸಿದೆ ಈ ಹಿನ್ನಲೆಯಲ್ಲಿ ಬರುವ ದಿನಗಳಲ್ಲಿ ಸರ್ಕಾರ ಅವರ ನೆರವಿಗೆ ಬರಲಿದೆ ಎಂದರು.
ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳನ್ನೊಳಗೊಂಡ ಅಖಂಡ ಧಾರವಾಡ ಜಿಲ್ಲೆಯಲ್ಲಿನ ಕೆಸಿಸಿ ಬ್ಯಾಂಕ್ ಬದಲಿಗೆ ಪ್ರತಿ ಜಿಲ್ಲೆಗೆ ಒಂದೊಂದು ಡಿಸಿಸಿ ಬ್ಯಾಂಕ್ ಸ್ಥಾಪನೆ ಮಾಡುವ ಒಕ್ಕಲು ತನಕ್ಕೆ ಮೂಲ ಬಂಡವಾಳವನ್ನು ಒದಗಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಸಚಿವರು ನಬಾರ್ಡ್‌ಗೆ ಮನವರಿಕೆ ಮಾಡುವ ಮೂಲಕ ಮೂರು ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಕ್ರಮ ಜರುಗಿಸಬೇಕೆಂದು ಕೇಳಿಕೊಂಡರು.
ಹಾವೇರಿ ಜಿಲ್ಲೆಯಲ್ಲಿ ಅತ್ಯಧಿಕ ಹಾಲು ಉತ್ಪಾದನೆಯನ್ನು ಮಾಡಲಾಗುತ್ತಿದೆ ಆದ್ದರಿಂದ ಜಿಲ್ಲೆಗೆ ಪ್ರತ್ಯೇಕ ಕೆಎಂಎಫ್ ಪ್ರಾರಂಭಿಸಿವದಕ್ಕೆ ಕ್ರಮವನ್ನು ಕೈಗೊಳ್ಳುವಂತೆ ಸಹಕಾರ ಸಚಿವರನ್ನು ವಿನಿಂತಿಸಿಕೊಂಡರು.
ವೇದಿಕೆಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ಕೃಷಿ ಸಚಿವ ಬಿ.ಸಿ.ಪಾಟೀಲ, ಜಿ.ಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ವಿರುಪಾಕ್ಷಪ್ಪ ಕಡ್ಲಿ, ಬಾಬುಗೌಡ ಪಾಟೀಲ, ಜಿ.ಎಂ.ಪಾಟೀಲ, ಜಿ;ಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ ಸಿಇಓ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಹಾಗೂ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss