ಹಾವೇರಿ: ಜಿಲ್ಲೆಯ ಯಾವುದೇ ಸರ್ಕಾರಿ, ನಿಗಮ ಮಂಡಳಿ, ಸರ್ಕಾರದ ಅನುದಾನಿತರ ಸಂಸ್ಥೆಯ ನೌಕರರು ಅಧಿಕಾರಿಗಳು ಹಾಗೂ ಅವರ ಅಲಂಬಿತ ಕುಟುಂಬದ ಸದಸ್ಯರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ತಕ್ಷಣದಿಂದಲೇ ಹಿಂದಿರುಗಿಸಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದ್ದಾರೆ.
ಸರ್ಕಾರಿ ನೌಕರರು, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಹಾಗೂ ಸಂಸ್ಥೆಗಳ ಅಧಿಕಾರಿ ನೌಕರರು ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ವಿತರಿಸುವ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡು ಸರ್ಕಾರದಿಂದ ವಿತರಿಸುವ ಪಡಿತರ ಮತ್ತು ಇನ್ನಿತರ ಸೇವೆಗಳನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಕಾರಣ ಇದು ನಿಯಮ ಬಾಹಿರವಾಗಿದ್ದು ಎಂದು ಹೇಳಿದ್ದಾರೆ.
ಈ ಪ್ರಕರಣೆಯ ಒಂದು ತಿಂಗಳ ಒಳಗಾಗಿ ಆಹಾರ, ನಾಗರಿಕ ಸಬರಾಜು ಮತ್ತು ಗ್ರಾಹಕರ ಇಲಾಖೆಗೆ ಕೂಡಲೇ ಹಿಂದಿರುಗಿಸಿ ಕಾರ್ಡ್ನ್ನು ರದ್ದುಪಡಿಸಿಕೊಳ್ಳತ್ತಕ್ಕದ್ದು. ಒಂದು ವೇಳೆ ಬಿಪಿಎಲ್ ಕಾರ್ಡ್ನ್ನು ಹಿಂದಿರುಗಿಸದೇ ತಿಂಗಳ ನಂತರ ನೌಕರರು, ಅಧಿಕಾರಿಗಳು, ಅಲಂಬಿತ ಕುಟುಂಬದ ಸದಸ್ಯರು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಮಾಹಿತಿ ಅಥವಾ ದೂರುಗಳು ಸ್ವೀಕೃತವಾದರೆ ಅಂತಹ ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸರ್ಕಾರ ೨೦೨೦ ಜೂನ್ ೧೦ರ ಸರ್ಕಾರದ ಸುತ್ತೋಲೆಯನ್ನು ಹೊರಡಿಸಿ ಆದೇಶಿಸಲಾಗಿದೆ.
ಕಾರಣ ಒಂದು ತಿಂಗಳೊಳಗಾಗಿ ಜಿಲ್ಲೆಯ ಆಯಾ ತಹಶೀಲ್ದಾರ ಕಚೇರಿಯ ಆಹಾರ ಶಾಖೆಗೆ ತಾವು ಹೊಂದಿರುವ ಬಿ.ಪಿ,ಎಲ್. ಕಾರ್ಡ್ಗಳನ್ನು ಹಿಂದಿರುಗಿಸಲು ಸೂಚಿಸಲಾಗಿದೆ. ಇಲ್ಲವಾದರೆ ಶಿಸ್ತು ಕ್ರಮದ ಜೊತೆ ಕ್ರಿಮಿನಲ್ ಮೊಕದ್ದಮೆ ಹಾಗೂ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.