Wednesday, August 10, 2022

Latest Posts

ಸರಗಳ್ಳರ ಕಣ್ಣು ಇದೀಗ ಪುರುಷರ ಕತ್ತಿನಲ್ಲಿರುವ ಚಿನ್ನದ ಸರದ ಮೇಲೆ ಬಿತ್ತು: ವ್ಯಕ್ತಿಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳರು

ಮೈಸೂರು: ಇಷ್ಟು ದಿನ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಸರಗಳ್ಳರ ಕಣ್ಣು ಇದೀಗ ಕತ್ತಿನಲ್ಲಿ ಚಿನ್ನದ ಸರ ಹಾಕಿಕೊಳ್ಳುವ ಪುರುಷರ ಮೇಲೂ ಬಿದ್ದಿದೆ. ರಸ್ತೆ ಬದಿಯಲ್ಲಿ ಸಿಗರೇಟ್ ಸೇದುತ್ತ ನಿಂತಿದ್ದ ವ್ಯಕ್ತಿಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾದ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ.
ಕಲ್ಯಾಣಗಿರಿಯ ಸೈಯದ್ ಇಮ್ರಾನ್ ಎಂಬವರೇ ಸರ ಕಳೆದುಕೊಂಡವ. ಈತ ಲಲಿತ್ ಮಹಲ್ ರಸ್ತೆಯ ಆರ್ಚ್ ಸಮೀಪದ ರಸ್ತೆ ಬದಿಯಲ್ಲಿ ಸಿಗರೇಟ್ ಸೇದುತ್ತ ನಿಂತಿದ್ದ ಸಂದರ್ಭ ಬೈಕಿನಲ್ಲಿ ಬಂದ ಸರಗಳ್ಳರು ಆತನ ಕತ್ತಿನಲ್ಲಿದ್ದ ೧೨ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss