Saturday, August 13, 2022

Latest Posts

ಸರಣಿ ಸಭೆ ಬಳಿಕ ಚೀನಾ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣ: ನರವಾನೆ

ಹೊಸದಿಲ್ಲಿ: ಲಡಾಖ್‌ ಗಡಿ ಬಿಕ್ಕಟ್ಟು ಕುರಿತು ಮಾತುಕತೆ ನಡೆದ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಾನೆ ತಿಳಿಸಿದ್ದಾರೆ.
ಭಾರತವು ಚೀನಾ ಜತೆ ಹೊಂದಿರುವ ಗಡಿಯುದ್ದಕ್ಕೂ ಪರಿಸ್ಥಿತಿ ತಹಬಂದಿಗೆ ಬಂದಿದೆ. ಕಾರ್ಫ್ಸ್‌ ಕಮಾಂಡರ್‌ ಹಾಗೂ ಸ್ಥಳೀಯ ಹಂತದ ಮಿಲಿಟರಿ ಅಧಿಕಾರಿಗಳ ಶ್ರೇಣಿ ಮಾತುಕತೆ ನಡೆದ ಬಳಿಕ ಉಭಯ ರಾಷ್ಟ್ರಗಳ ಭಿನ್ನಾಭಿಪ್ರಾಯ ಶಮನವಾಗಿದ್ದು, ಪರಿಸ್ಥಿತಿ ತಿಳಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾತುಕತೆಯ ಫಲವಾಗಿ ಎರಡೂ ರಾಷ್ಟ್ರಗಳ ನಡುವೆ ಸಮಚಿತ್ತ ಭಾವ ಉಂಟಾಗಿದೆ. ಗಡಿಯಲ್ಲಿ ಶಾಂತಿ ವಾತಾವರಣ ಸೃಷ್ಟಿಯಾಗಿದೆ. ಮುಂದೆಯೂ ಮಾತುಕತೆ ನಡೆಯಲಿದ್ದು, ಎಲ್ಲ ಸಮಸ್ಯೆ ಬಗೆಹರಿಯಲಿವೆ ಎಂದು ಹೇಳಿದ್ದಾರೆ.
ಮೇ 5ರಿಂದ ಚೀನಾವು ಲಡಾಖ್‌ ಅಂತಾರಾಷ್ಟ್ರೀಯ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಹೆಚ್ಚಿನ ಸೇನೆ ನಿಯೋಜಿಸಿ ಉದ್ಧಟತನ ಮೆರೆದಿತ್ತು. ಇದಕ್ಕೆ ಭಾರತ ಸಹ ಪ್ರತ್ಯುತ್ತರವಾಗಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿತ್ತು.ಇ ದರಿಂದ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss