ಮಂಗಳೂರು: ಸರಳ ದಸರಾ ಆಚರಣೆ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಬಂಧಿಸಲಾಗಿದೆ.
ಅವರು ಬ್ಯಾಂಡ್ ಸೆಟ್ ಜೋಡಿ ಸಾರೋಟಿನಲ್ಲಿ ಮೈಸೂರು ಅರಮನೆ ಮುಂದೆ ದಸರಾ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು.
ಸರ್ಕಾರ ಈ ಬಾರಿ ಅತಿ ಸರಳವಾಗಿ ದಸರಾ ಆಚರಣೆ ನಡೆಸುತ್ತಿರುವುದನ್ನು ವಿರೋಧಿಸಿದ್ದ ಅವರು ದಸರಾ ಹಬ್ಬವನ್ನ ಹಾಗು ಚಾಮುಂಡೇಶ್ವರಿ ತಾಯಿ ಭಾವಚಿತ್ರ ಇಟ್ಟು ಬ್ಯಾಂಡ್ ಸೆಟ್ ಜೋಡಿ ಸಾರೋಟಿನಲ್ಲಿ ಮೈಸೂರು ಅರಮನೆ ಮುಂದೆ ದಸರ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. ಇದಕ್ಕೆ ಅವಕಾಶ ನೀಡದ ಪೊಲೀಸರು ವಾಟಾಳ್ ನಾಗರಾಜ್ ಹಾಗು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೋಲೀಸರು.