ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ತಾ. 13ರಂದು ಧ್ವಜಾರೋಹಣಗೊಂಡು ತಾ. 20ರ ವರೆಗೆ ಅತ್ಯಂತ ಸರಳ ರೀತಿಯಲ್ಲಿ ಸರಕಾರದ ಆದೇಶದಂತೆ ನಡೆದಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಉತ್ಸವ ನಡೆದಿದೆ. ಜಗತ್ತಿನಲ್ಲಿ ಉದ್ಭವಿಸಿರುವ ಕೊರೊನಾ ಮಹಾಮಾರಿಯನ್ನು ಶ್ರೀ ದೇವಿಯು ದೂರೀಕರೀಕರಿಸುವಂತೆ ಪ್ರಾರ್ಥಿಸೋಣ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ. ರಥಬೀದಿಯಲ್ಲಿ ಯಾವುದೇ ರಥೋತ್ಸವ ನಡೆದಿಲ್ಲ. ಶಯನೋತ್ಸವ ಒಳಾಂಗಣದಲ್ಲಿ ದೇವರ ಬಲಿ, ಚಿನ್ನದ ರಥೋತ್ಸವ ಕೇವಲ ಒಳ ನೌಕರರ ಉಪಸ್ಥಿತಿಯಲ್ಲಿ ನಡೆದಿದೆ. ಸೋಮವಾರ ಸಂಜೆ ಬಜಪೆ ಪೋಲೀಸರ ಉಪಸ್ಥಿತಿಯೊಂದಿಗೆ ದೇವರ ಉತ್ಸವ ಮೂರ್ತಿ ದೇಗುಲದ ಗೋಪುರದ ಬಳಿ ಬಂದು ಬಳಿಕ ಧ್ವಜಾವರೋಹಣ ನಡೆಯಿತು.