Wednesday, August 10, 2022

Latest Posts

ಸರಳ ವರ್ಚುಯುಲ್ ಪ್ಲಾಟ್ ಫಾರಂ ಸಮಾರಂಭ: ‘ಸವಾಲುಗಳ 1 ವರ್ಷ ಪರಿಹಾರದ ಸ್ವರ್ಷ’ ಪುಸ್ತಕ ಬಿಡುಗಡೆ

ಕೋಲಾರ: ಜಿಲ್ಲಾ ಪಂಚಾಯತ್‌ನಲ್ಲಿ ರಾಜ್ಯ ಸರ್ಕಾರದ ‘ಸವಾಲುಗಳ ಒಂದು ವರ್ಷ ಪರಿಹಾರದ ಸ್ವರ್ಷ’ ಪುಸ್ತಕ ಬಿಡುಗಡೆ ಸಮಾರಂಭದ ಹಿನ್ನಲೆಯಲ್ಲಿ ಬೆಂಗಳೂರಿನ ವಿಧಾನ ಸೌಧದ ಬಾಂಕ್ವೇಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ವರ್ಚುಯುಲ್ ಪ್ಲಾಟ್ ಫಾರಂ ಸಮಾರಂಭದ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ,ಜಿಪಂ ಸಿಇಒ ದರ್ಶನ್, ಅಪರ ಡಿಸಿ ಶಿವಸ್ವಾಮಿ,ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ, ಕೆ.ಜಿ.ಎಫ್ ಎಸ್.ಪಿ. ಸುಮಿತ, ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.
ಮಾದರಿ ರಾಜ್ಯವಾಗಿ ಕರ್ನಾಟಕ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ದೇಶದಲ್ಲಿಯೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಮೂಲಕ ಸರ್ವಾಂಗೀಣಾ ಅಭಿವೃದ್ದಿ ನನ್ನು ಮುಖ್ಯ ಗುರಿಯಾಗಿದ್ದು ಇದಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡುವುದಕ್ಕೆ ಎಲ್ಲರ ಸಹಕಾರ ಕೋರಿದರು.
ರಾಜ್ಯದಲ್ಲಿ ಸುಭದ್ರ ರಚಿಸಲು ೧೫ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ೧೨ ಮಂದಿ ಶಾಸಕರನ್ನು ಗೆಲ್ಲಿಸಿ ಕೊಂಡು ಆಡಳಿತ ನಡೆಸಲಾಯಿತು. ಇದಕ್ಕೂ ಮುನ್ನ ಬರಗಾಲದಲ್ಲಿ ಅಧಿಕಾರ ವಹಿಸಿ ಕೊಂಡು ಇನ್ನು ಸಚಿವ ಸಂಪುಟವನ್ನು ರಚಿಸದೆ ಇದ್ದ  ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿ ಸಂದರ್ಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕುಸಿತದಿಂದ ಸುಮಾರು ಒಂದು ಲಕ್ಷಕ್ಕೂ ಅಧಿದ ಕುಟುಂಬಗಳು ಬೀದಿಪಾಲಾಗಿತ್ತು. ಅವರಿಗೆ ೫ ಲಕ್ಷ ರೂ ವೆಚ್ಚದಲ್ಲಿ ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಲು ಸುಮಾರು ೩-೪ ತಿಂಗಳ ಕಾಲ ಶ್ರಮಿಸ ಬೇಕಾಗಿ ಬಂದಿತು ಎಂದು ನೆನಪಿಸಿದರು.
ನಂತರದಲ್ಲಿ ಕೋವಿಡ್-೧೯ ಹೆಮ್ಮಾರಿಯು ವಿಶ್ವವನ್ನೆ ಸಂಕಷ್ಟಕ್ಕೆ ಈಡು ಮಾಡಿದಾಗ ರಾಜ್ಯದಲ್ಲಿ ೪೫ ದಿನಗಳ ಲಾಕ್‌ಡೌನ್ ಅನಿವಾರ್ಯವಾಗಿ ಅರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಯಿತು.ಈ ಸಂದರ್ಭದಲ್ಲಿ ಜನರ ಅರೋಗ್ಯದ ರಕ್ಷಣೆ ಜೂತೆಗೆ ಅರ್ಥಿಕ ಕೊರತೆಯನ್ನು ನೀಗಿಸಲು ಬಡವರಿಗೆ,ರೈತರಿಗೆ,  ಹಿಂದುಳಿದ ವರ್ಗ, ಕಾರ್ಮೀಕರಿಗೆ, ನೇಕಾರರಿಗೆ, ಮಡಿವಾಳರಿಗೆ ಸವಿತಾ ಸಮುದಾಯದವರಿಗೆ, ಮಹಿಳಾ ಸ್ವಸಹಾಯ ಸಂಘಗಳ ಸ್ವಾಭಿಮಾನ ಬದುಕಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ತಲುಪುವ ವ್ಯವಸ್ಥೆ ಮಾಡಲಾಯಿತು ಎಂದು ವಿವರಿಸಿದರು.
ಈ ಸಂದರ್ಭಲದಲಿ ರೈತರ ಭೂಮಿ ಶೇ ೨ ಕ್ಕಿಂತ ಹೆಚ್ಚು ದಾಟದಂತೆ ಜಾಗೃತಿ ವಹಿಸಲಾಗುವುದು.ಭೂ ಸುದಾರಣೆ ಕಾಯ್ದೆ, ಎ.ಪಿ.ಎಂ.ಸಿ. ಕಾಯ್ದೆಗಳಿಗೆ ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಪ್ರಗತಿಯಲ್ಲಿದೆ. ಕೋವಿಡ್ ನಡುವೆಯೂ ಅಭಿವೃದ್ದಿ ಕಾರ್ಯಗಳು ಯಶಸ್ವಿಯಾಗಿ ಮಾಡಲಾಗಿದೆ.ಇದಕ್ಕೆ ಸಹಕಾರ ನೀಡಿದ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಕೃತಜ್ಞಾನತೆಯನ್ನು ಅರ್ಪಿಸುವ ಮೂಲಕ  ನಾಡಿನ ಜನತೆ ಎಲ್ಲರೂ ನೆಮ್ಮದಿಯ ಬದುಕಿಗೆ ಅವಶ್ಯವಾದ ಸೌಲಭ್ಯಗಳನ್ನು ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಘೋಷಿಸಿದರು.
ಉಪ ಮುಖ್ಯ ಮಂತ್ರಿಗಳಾದ ಅಶ್ವಥ್ ನಾರಾಯಣ, ಉಪ ಮುಖ್ಯ ಮಂತ್ರಿ ಗೋವಿಂದ ಕಾರಜೋಳ ಮತ್ತಿತರರು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss