Wednesday, August 17, 2022

Latest Posts

ಕೇಂದ್ರ ಸಚಿವರ ಅಗಲಿಕೆಯಿಂದ ರಾಜ್ಯ, ರಾಷ್ಟ್ರ , ಬಿಜೆಪಿಗೆ ತುಂಬಲಾರದ ನಷ್ಟ: ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್

ಬೆಳಗಾವಿ : ಸರಳ ಸಜ್ಜನಿಕೆಗೆ ಮತ್ತೊಂದು ಹೆಸರೆ ದಿ.ಕೇಂದ್ರ ಸಚಿವ ಸುರೇಶ ಅಂಗಡಿ. ಅವರ ಅಗಲಿಕೆಯಿಂದ ರಾಜ್ಯ, ರಾಷ್ಟ್ರ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.
ಮಂಗಳವಾರ ನಗರದಲ್ಲಿರವ ದಿ.ಕೇಂದ್ರ ಸಚಿವ ಸುರೇಶ ಅಂಗಡಿ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಪಕ್ಷ ಸಂಘಟನೆ ಮಾಡಿ  ಶಕ್ತಿ ತುಂಬಿದ್ದರು. ಬೆಳಗಾವಿ ಜಿಲ್ಲಾ  ಉಪಾಧ್ಯಕ್ಷ, ಅಧ್ಯಕ್ಷರಾಗಿ ನೂರಾರು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು.ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಬೆಳಗಾವಿಯಿಂದ ಆಯ್ಕೆಯಾಗುವುದು ತುಂಬಾ ಕಷ್ಟ. ಭಾಷಾ, ಬೇರೆ‌ ಬೇರೆ ಸಮಸ್ಯೆ ಇರುತ್ತದೆ. ಅದನ್ನು ಮೀರಿ ಜನರ ಪ್ರೀತಿಗೆ ಪಾತ್ರರಾಗಿ ನಾಲ್ಕು ಬಾರಿ ಸಂಸದರಾಗಿ ಸುರೇಶ ಅಂಗಡಿ ಅವರು ಆಯ್ಕೆಯಗಿ ನಮ್ಮಂಥ ಕಿರಿಯ ಸಂಸದರಿಗೆ ಆದರ್ಶ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿಕೊಂಡರು.
ಸುರೇಶ ಅಂಗಡಿ ಆದರ್ಶದ ರಾಜಕಾರಣಿ ನಾಲ್ಕನೇ ಬಾರಿ ಸಂಸದರಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ನನೆಗುದಿಗೆ ಬಿದ್ದ ರೈಲ್ವೆ ಯೋಜನೆಗೆ ಜೀವ ತುಂಬಿದ್ದರು. ಅತೀ ಹೆಚ್ಚು ಅನುದಾನ ತಂದು ಬೆಳಗಾವಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನನ್ನ ಕ್ಷೇತ್ರದ ಬಗ್ಗೆ ಸಾಕಷ್ಟು ಕಾಳಜಿ ಇತ್ತು. ಅವರು ನನ್ನಗೊಬ್ಬ ಹಿರಿಯಣ್ಣ ಎಂದರು.
ನಾನು 2009ರಲ್ಲಿ ಲೋಕಸಭಾಗೆ ಆಯ್ಕೆಯಾದೆ. ಅವರು 2004ರಲ್ಲಿಯೇ ಆಯ್ಕೆಯಾಗಿದ್ದರು. ಅವರು ನನಿಗಿಂದ ಹಿರಿಯ  ಸಂಸದರಾಗಿ ಹೇಗೆ ಕೆಲಸ‌ ಮಾಡಬೇಕೆಂದು ಪಾಠ ಮಾಡಿಕೊಟ್ಟರು. ನಾವು ರೈಲ್ಬೆ ಯೋಜನೆಗೆ ಪತ್ರ ತೆಗೆದುಕೊಂಡರು ಹೋದರೆ ರೈಲ್ವೆ ಅಧಿಕಾರಿಗಳನ್ನು ಕರೆದು ತತಕ್ಷಣ ಪರಿಹಾರ ಮಾಡಿಕೊಡುತ್ತಿದ್ದರು. ಅವರ ಅಗಲಿಕೆಯಿಂದ ಸಾಕಷ್ಟು ನಷ್ಟವಾಗಿದೆ ಎಂದರು.
ಸುರೇಶ ಅಂಗಡಿ ಅವರ ಅಗಲಿಕೆಯಿಂದ ಸಾಕಷ್ಟು‌ನೋವಾಗಿದೆ. ಆಘಾತವಾಗಿದೆ. ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ‌ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸೂರಾನಾ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ವಿಧಾನ ಸಭೆಯ ಉಪಸಭಾಪತಿ ಆನಂದ ಮಾಮನಿ, ದೆಹಲಿಯ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಸರ್ಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ‌ ಮಹಾಂತೇಶ ಕವಟಗಿಮಠ, ಶಾಸಕ ಅನಿಲ ಬೆನಕೆ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!