ಹೊಸದಿಲ್ಲಿ: ಸ್ವಾತಂತ್ರೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಕೆಂಪು ಕೋಟೆಯ ಲಾಹೋರ್ ಗೇಟ್ ಎದುರು ಆಗಮಿಸಿದ ಪಿಎಂ ಮೋದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಅವರು ಸ್ವೀಕರಿಸಿದ್ದರು.
ಪ್ರಧಾನ ಮಂತ್ರಿ ವಂದನೆ ಸಲ್ಲಿಸಿದ ನಂತರ, ಪೊಲೀಸ್ ಕಾವಲುಗಾರರು ಅವರಿಗೆ ಸಾಮಾನ್ಯ ವಂದನೆ ಸಲ್ಲಿಸಿದ್ದಾರೆ. ಭಾರತ ಸ್ವಾತಂತ್ರೋತ್ಸವ ಧ್ವಜಾರೋಹಣದ ವೇಳೆಯಲ್ಲಿ 21 ಗುಂಡುಗಳನ್ನು ಹಾರಿಸುವ ಮೂಲಕ ಭಾರತಕ್ಕೆ ಗೌರವ ಸಲ್ಲಿಸಲಿದ್ದಾರೆ.
2233 ಫೀಲ್ಡ್ ಬ್ಯಾಟರಿ ಲೆ.ಜೆ. ಜಿತೇಂದ್ರ ಸಿಂಗ್ ಮೆಹ್ತಾ, ಗನ್ ಆಫೀಸರ್ ನಾಯಬ್ ಸುಬೇದಾರ್ (ಎಐಜಿ) ಅನಿಲ್ ಚಂದ್ ಘೋಷಣೆ ನೀಡಿದರು.
ಬಳಿಕ ಆತ್ಮ ನಿರ್ಭರ ಭಾರತದ ಕುರಿತು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದಾರೆ. ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ 7ನೇ ಭಾರಿ ಸ್ವಾತಂತ್ರೋತ್ಸವ ದಿನ ಭಾಷಣ ಮಾಡುತ್ತಿದ್ದಾರೆ.