Wednesday, August 10, 2022

Latest Posts

ಸರಸ್ವತಿ ಪುತ್ರ ಎಸ್‌ಪಿಬಿ ಇನ್ನಿಲ್ಲ ಎಂದು ನಂಬುವುದಕ್ಕೇ ಆಗುತ್ತಿಲ್ಲ: ಡಿಸಿಎಂ ಲಕ್ಷ್ಮಣ ಸವದಿ

ಬೆಂಗಳೂರು: ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ವಿಧಿವಶರಾಗಿದ್ದು, ಸಂಗೀತದ ಒಂದು ಯುಗವೇ ಅಂತ್ಯವಾಯ್ತು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಎಸ್‌ಪಿಬಿ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನೆನೆಸಿಕೊಳ್ಳಲು ಅತ್ಯಂತ ದುಃಖ ಆಗುತ್ತಿದೆ. ಭೌತಿಕವಾಗಿ ಎಸ್‌ಪಿಬಿ ನಮ್ಮೊಟ್ಟಿಗೆ ಇಲ್ಲದಿರಬಹುದು, ಅವರ ಕಂಠದಿಂದ ಎಂದಿಗೂ ಅವರು ಜೀವಂತ ಎಂದಿದ್ದಾರೆ. ಅವರಿಗೆ ಸಂಗೀತವೇ ಸರ್ವಸ್ವವಾಗಿತ್ತು. ಅನೇಕ ಭಾಷೆಗಳಲ್ಲಿ ನಲವತ್ತು ಸವಿರ ಹಾಡುಗಳನ್ನು ಹಾಡಿರುವ ಎಸ್‌ಪಿಬಿ ಅವರನ್ನು ಎಷ್ಟು ಹೊಗಳಿದರೂ ಸಾಲದು ಎಂದರು. ಸರಸ್ವತಿ ಪುತ್ರ ಎಸ್‌ಪಿಬಿ ಅವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss