ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆ ಸಾರ್ವಜನಿಕೆರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸರ್ಕಾರದ ಆದೇಶಗಳನ್ನು ಪೊಲೀಸರು ಪಾಲಿಸುತ್ತಾರೆ ಹಾಗೂ ಸರ್ಕಾರ ನೀಡಿದ ಸೂಚನೆಯಂತೆ ಮಾಸ್ಕ್ ಧರಿಸದವರಿಂದ ದಂಡ ವಿಧಿಸಲು 110 ಯಂತ್ರಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಮಾಸ್ಕ್ ಕಡ್ಡಾಯವಾಗಿ ಮೂಗು ಹಾಗೂ ಬಾಯಿ ಮುಚ್ಚುವ ಹಾಗೆ ಧರಿಸಬೇಕು ಹಾಗೂ ಮಾಸ್ಕ್ ಇಲ್ಲದಿದ್ದರೆ ಕರವಸ್ತ್ರಗಳನ್ನು ಬಳಸಬಹುದು. ಕೊರೋನಾದಿಂದ ಸುರಕ್ಷಿತರಾಗಿರಲು ಸಾರ್ವಜನಿಕರಿಗೆ ಉಚಿತ ಮಾಸ್ಕ್ ನೀಡಲಾಗುವುದು ಎಂದರು.