Thursday, August 18, 2022

Latest Posts

ಸರ್ಕಾರದ ಸೌಲಭ್ಯ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿ, ಪಕ್ಷ ಹಾಗೂ ಮುಖಂಡರ ಗೌರವ ಹೆಚ್ಚಿಸಿ: ಸಂಸದ ರಾಘವೇಂದ್ರ

ಹೊಸ ದಿಗಂತ ವರದಿ, ಶಿವಮೊಗ್ಗ:

ಗ್ರಾ.ಪಂ. ಸದಸ್ಯತ್ವ ಸ್ಥಾನ ಅತ್ಯಂತ ಜವಾಬ್ದಾರಿಯುತವಾದುದು. ಸರ್ಕಾರದ ಸೌಲಭ್ಯವನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿ ಪಕ್ಷ ಹಾಗೂ ಮುಖಂಡರ ಗೌರವ ಹೆಚ್ಚಳವಾಗುವ ರೀತಿ ವರ್ತಿಸಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಸೋಮವಾರ ಶಿಕಾರಿಪುರ ಪಟ್ಟಣದಲ್ಲಿ ಬಿಜೆಪಿ ಬೆಂಬಲಿತ ನೂತನ ಗ್ರಾ.ಪಂ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಮಂತ್ರಿಗಳು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ವೇಗದ ಚಾಲನೆ ನೀಡಿದ್ದು ಮಳೆಗಾಲದ ಮುನ್ನಾ ಎಲ್ಲ ಯೋಜನೆಗಳು ಲೋಕಾರ್ಪಣೆಗೊಳ್ಳಲಿದೆ. ಕಾಳೇನಹಳ್ಳಿ ಬಳ್ಳಿ ಕಲ್ಲುಒಡ್ಡು ಯೋಜನೆ ಸಮೀಪದ ಮುಡುಬಸಿದ್ದಾಪುರದ ಕೃಷಿ ಭೂಮಿಗೆ ತೊಂದರೆಯಾಗದ ರೀತಿ ಯೋಜನೆ ರೂಪಿಸಿ ಚಾಲನೆ ನೀಡಿದರೂ ಗ್ರಾಮಸ್ಥರು ಮಾತ್ರ ಚುನಾವಣೆಯಲ್ಲಿ ಕೈಬಿಟ್ಟಿದ್ದಾರೆ ಎಂದು ಬೇಸರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!