Saturday, August 13, 2022

Latest Posts

ಸರ್ಕಾರಿ ಶಾಲೆಗಳಿಗೆ ಗುಡ್ ನ್ಯೂಸ್: ರಾಜ್ಯ ಮಟ್ಟದಿಂದ ಸಿಗಲಿದೆ ‘ಸ್ವಾಭಿಮಾನಿ ಸರ್ಕಾರಿ ಶಾಲೆ’ ಪ್ರಶಸ್ತಿ

ಬೆಂಗಳೂರು: ಈ ವರ್ಷ ರಾಜ್ಯ ಸರ್ಕಾರದಿಂದ ಸರ್ಕಾರಿ ಶಾಲೆಗಳಿಗೆ ಭರ್ಜರಿ ಗಿಪ್ಟ್ ಸಿಗಲಿದೆ. ಶಾಲೆಯಲ್ಲಿನ ಉತ್ತಮ ಆಡಳಿತ ವ್ಯವಸ್ಥೆ ಮತ್ತು ಶಿಕ್ಷಣದ ಗುಣಮಟ್ಟದ ಆಧಾರದ ಮೇಲೆ ರಾಜ್ಯ ಮಟ್ಟದಿಂದ ಸ್ವಾಭಿಮಾನಿ ಸರ್ಕಾರಿ ಶಾಲೆ ಎಂಬ ಪ್ರಶಸ್ತಿ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಬುಧವಾರ ನಡೆದ ವೆಬಿನಾರ್ ಸಂವಾದದಲ್ಲಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಎಲೆಮರೆಯ ಕಾಯಿಯಂತೆ ಕೆಲಸ ಮಾಡುವ ಶಿಕ್ಷಕರನ್ನು ಗುರುತಿಸಬೇಕು, ಶಾಲೆಯಲ್ಲಿ ನೀಡುವ ಶಿಕ್ಷಣದ ಗುಣಮಟ್ಟ, ನಿಬ್ಬಂದಿಗಳ ನಡುವಿನ ಸಂಬಂಧ, ಶಾಲೆಯ ಸರ್ವಾಂಗೀಣ ಪ್ರಗತಿ, ಶಾಲಾ ಅಭಿವೃದ್ಧಿ ಎಲ್ಲವನ್ನೂ ಪರೀಶೀಲಿಸಿ ರಾಜ್ಯ ಮಟ್ಟದಂದ ಸ್ವಾಭಿಮಾನಿ ಸರ್ಕಾರಿ ಶಾಲೆ ಎಂಬ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಕೊರೋನಾ ಸಂಕಷ್ಟದಲ್ಲಿ ಶಾಲೆಗಳ ನಡುವೆ ಒಂದು ಧನಾತ್ಮಕ ಸ್ಪರ್ಧೆ ನಡೆದರೆ ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬಹುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss