Monday, July 4, 2022

Latest Posts

ಸರ್ಕಾರಿ ಷೇರುಗಳಿರುವ ಸಹಕಾರ ಸಂಸ್ಥೆಗಳಿಗೆ ಕಾರ್ಯಕರ್ತರ ನಾಮಿನೇಷನ್: ಸಚಿವ ಸೋಮಶೇಖರ್

ಹೊಸ ದಿಗಂತ ವರದಿ, ಮೈಸೂರು:

ಸರ್ಕಾರಿ ಷೇರು ಇರುವ ಸಹಕಾರ ಸಂಸ್ಥೆಗಳಲ್ಲಿ ಪಕ್ಷದ ಕಾರ್ಯಕರ್ತರ ನಾಮಿನೇಷನ್ ಮಾಡಲಾಗುವುದು. ಆ ಬಗ್ಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮಂಗಳವಾರ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ತಾಲೂಕು ಘಟಕದ ವಿವಿಧ ಪ್ರಮುಖರು, ಪದಾಧಿಕಾರಿಗಳ ಸಭೆಯಲ್ಲಿ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ಟಿ.ನರಸೀಪುರ ತಾಲೂಕಿನಲ್ಲಿ ಹಲವಾರು ಮಂದಿ ಗೆದ್ದಿದ್ದೀರ. ಆದರೆ, ಕೆಟಗರಿ ರಚಿಸುವಲ್ಲಿ ತಾಂತ್ರಿಕ ತೊಡಕಾಗಿದೆ. ಕಾರಣ, ಯಾವ ಯಾವ ಕ್ಷೇತ್ರಗಳಲ್ಲಿ ಇದುವರೆಗೆ ಯಾವ ಕೆಟಗರಿಗೆ ಅವಕಾಶ ಲಭಿಸಿಲ್ಲವೋ, ಅಂಥವರಿಗೆ ಅವಕಾಶ ಕೊಡುವಂತಹ ಸಾಫ್ಟ್ವೇರ್ ಅನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ಕೆಟಗರಿ ತೀರ್ಮಾನದ ಅಧಿಕಾರವನ್ನು ನಮಗೇ ಕೊಡಬೇಕೆಂದು ಎಲ್ಲ ಸಚಿವರು ಮನವಿ ಮಾಡಿದರೂ, ಸಹ ಚುನಾವಣಾ ಆಯೋಗದ ತೀರ್ಮಾನವಾಗಿರುವುದರಿಂದ ಏನನ್ನೂ ಮಾಡಲಾಗದು ಎಂದರು.
ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಸಂಬAಧ ಸಹ ನಾನು ಚರ್ಚೆ ಮಾಡಿದ್ದೇನೆ. ಆದರೆ, ಗ್ರಾಮ ಪಂಚಾಯಿತಿಗಳಿಗೆ ಸುಮಾರು 25 ಕೋ.ರೂ. ಅನುದಾನ ಬಿಡುಗಡೆಯಾಗುತ್ತದೆ. ಇದರ ನೇರ ಜವಾಬ್ದಾರಿ ಶಾಸಕರಿಗೆ ಹೋಗುತ್ತದೆ. ಆದರೆ, ಉಸ್ತುವಾರಿ ಸಚಿವರಿಗೂ ಅನುದಾನ ಬಳಕೆಯ ಜವಾಬ್ದಾರಿಯನ್ನು ಕೊಡುವಂತೆ ನಾವು ಮಂತ್ರಿಗಳು ಕೇಳಿದ್ದೇವೆ. ಇದರಿಂದ ಅನುದಾನ ಬಳಕೆ ಬಗ್ಗೆ ಗಮನಹರಿಸಬಹುದಾಗಿತ್ತು. ಆದರೆ, ಅದೂ ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಟಿ.ನರಸೀಪುರ ಬಿಜೆಪಿ ತಾಲೂಕು ಅಧ್ಯಕ್ಷ ಲೋಕೇಶ್ ನಾಯಕ್, ರಾಜ್ಯ ಹಿರಿಯ ಕಾರ್ಯಕಾರಿಣಿ ಸದಸ್ಯ ಕರೋಟಿ ಮಹದೇವಯ್ಯ, ವಿಧಾನಪರಿಷತ್ ಮಾಜಿ ಸದಸ್ಯ ಸಿ. ರಮೇಶ್, ಮಾಜಿ ಶಾಸಕರಾದ ಭಾರತಿ ಶಂಕರ್, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಎಂ. ಸೇರಿದಂತೆ ಅನೇಕ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss