ತುಮಕೂರು: ಕೊರೋನಾ ಪತ್ತೆ ಮಾಡಲು ಸರ್ಕಾರ ಶಿಫಾರಸು ಮಾಡಿರುವ ರಾಫಿಡ್ ಅಂಟಿಜನ್ ಟೆಸ್ಟ್ ಅಷ್ಟೋಂದು ಫಲಕಾರಿಯಲ್ಲ ಎಂದು ವೈದ್ಯರೂ ಆಗಿರುವ ಕುಣಿಗಲ್ ಶಾಸಕ ಡಾ.ರಂಗನಾಥ್ ಅಭಿಪ್ರಾಯ ಪಟ್ಟಿದ್ಧಾರೆ.
ಅವರು ಇಂದು ತುಮಕೂರು ಜಿಲ್ಲಾಪಂಚಾಯತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ 1000ಮಂದಿಯನ್ನು ರಾಪಿಡ್ ಅಂಟಿಜನ್ ಪರೀಕ್ಷೆಗೆ ಒಳಪಡಿಸಿದಾಗ 600ಜನರಿಗೆ ಮಾತ್ರ ಪಾಸಿಟೀವ್ ಎಂದು ತೋರಿಸುತ್ತದೇ,ಆದರೆ ಎಲ್ಲರಿಗೂ ಪಾಸಿಟೀವ್ ಇದ್ದರೂ ಉಳಿದ 400ಮಂದಿ ನೆಗೆಟಿವ್ ಎಂದು ಜನರ ನಡುವೆ ಸೇರುತ್ತಾರೆ ಇದರಿಂದ ಕೋವಿಡ್ ಹರಡುವಿಕೆ ಹೆಚ್ಚಾಗಿದೆ ಎಂದರು.ಈ ಹಿನ್ನೆಲೆಯಲ್ಲಿ ಪಿಸಿಆರ್ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಮಾತ್ರ ಕರಾರುವಾಕ್ಕಾಗಿ ಫಲಿತಾಂಶ ಬರಲು ಸಾಧ್ಯ ಎಂದರು.
ಕೋವಿಡ್ ಗೆ ಹೆದರುವ ಅಗತ್ಯವಿಲ್ಲ, ಉತ್ತಮ ಆಹಾರ ಸೇರಿಸುವುದು ವ್ಯಾಯಾಮ ಮಾಡುವುದು ಮಾಡಬೇಕು. ಮಾನಸಿಕವಾಗಿ ದೃಡತೆ ಬೆಳೆಸಿಕೊಳ್ಳಬೇಕು ಎಂದರು.