ಹೊಸದಿಗಂತ ಆನ್ಲೈನ್ ಡೆಸ್ಕ್:
ಹೀಗೊಂದು ವಿಲಕ್ಷಣ ಘಟನೆ ಘಟನೆ ನಡೆದಿರುವುದು ಟರ್ಕಿಯಲ್ಲಿ. ಯುವತಿಯೊಬ್ಬಳು
ಸೆವಿಂಕ್ ಸೆಕ್ಲಿಕ್ ಎಂಬ 25 ವರ್ಷದ ಯುವತಿ ಇನ್ನಷ್ಟು ಸುಂದರವಾಗಲು 2004ರ ಮೇ 2 ರಂದು ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಳು. ಆಕೆಗೆ ಸುಮಾರು ಎರಡು ಗಂಟೆಗಳ ಕಾಲ ಸರ್ಜರಿ ಮಾಡಲಾಗಿತ್ತು. ಕೆಲ ದಿನಗಳ ಬಳಿಕ ಆಜೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಇದಾಗಿ ಸ್ವಲ್ಪ ದಿನದಲ್ಲಿ ಆಕೆಯ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆ. ಅದನ್ನು ತೋರಿಸಲು ಆಸ್ಪತ್ರೆಗೆ ತೆರಳಿದ್ದಾಳೆ. ಛೇ ಅದೆಲ್ಲಾ ದೊಡ್ಡ ಸಮಸ್ಯೆ ಅಲ್ಲಪ್ಪಾ, ಸರ್ಜರಿ ಆದ ಕಾರಣ ಈ ರೀತಿ ಆಗುತ್ತದೆ, ಏನೂ ತೊಂದರೆಯಿಲ್ಲ ನೀವು ಹೋಗಿ ಎಂದು ವೈದ್ಯರು ಆಕೆಯನ್ನು ವಾಪಾಸು ಕಳುಹಿಸಿದ್ದರು.
ಇದಾಗಿ ಕೆಲ ದಿನಗಳಲ್ಲಿ ಸೆವಿಂಕ್ನ ಕಾಲಗಳು ಕಪ್ಪಾಗಲಾರಂಭಿಸಿದ್ದು, ನಡೆಯಲಾಗದೆ ಆಕೆ ಆಸ್ಪತ್ರೆ ಸೇರಿದ್ದಾಳೆ. ಪರೀಕ್ಷೆ ನಡೆಸಿದ ವೈದ್ಯರಿಗೆ ರಕ್ತದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಎರಡೂ ಕಾಲುಗಳನ್ನು ಮೊಣಕಾಲಿನ ಕೆಳಗೆ ಕತ್ತರಿಸದಿದ್ದರೆ ಆಕೆಯ ಜೀವಕ್ಕೇ ಅಪಾಯ ಎಂದು ಹೇಳಿ ಆಕೆಯ ಎರಡೂ ಕಾಲುಗಳನ್ನು ಕತ್ತರಿಸಿದ್ದಾರೆ.
ಕಾಲುಗಳನ್ನು ಕಳೆದುಕೊಂಡಿರುವ ಸೆವಿಂಕ್ ಇದೀಗ ಆಸ್ಪತ್ರೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. 1 ಕೋಟಿ ರೂಪಾಯಿ ಪರಿಹಾರ ಹಣ ನೀಡಬೇಕು ಎಂದು ಕೋರಿದ್ದಾಳೆ. ಆದರೆ ಯುವತಿಯ ಆರೋಪವನ್ನು ಆಸ್ಪತ್ರೆ ತಳ್ಳಿ ಹಾಕಿದೆ. ಆಸ್ಪತ್ರೆ, ಯುವತಿ ಮೂಗಿನ ಶಸ್ತ್ರಚಿಕಿತ್ಸೆಯಾದ ಕೆಲವೇ ದಿನಗಳಲ್ಲಿ ಚಿಕನ್ ತಿಂದ ಕಾರಣ ಈ ರೀತಿ ಸಮಸ್ಯೆಯಾಗಿದೆ ಎಂದು ಹೇಳಿದೆ.