ಬೀಜಿಂಗ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಅವರ ಆರೋಗ್ಯ ಪರಾಮರ್ಶೆಗೆ ಚೀನಾ ಮೂವರು ತಜ್ಞರ ತಂಡವೊಂದನ್ನು ಅಲ್ಲಿಗೆ ಕಳುಹಿಸಿದೆ. ಇದರಿಂದಾಗಿ ಕಿಮ್ ಆರೋಗ್ಯದ ಬಗ್ಗೆ ಎದ್ದ ಊಹಾಪೋಹಗಳಿಗೆ ಚೀನಾ ತೆರೆ ಎಳೆದಿದೆ.
ಗುರುವಾರದಂದು ಮೂವರ ತಜ್ಞರ ತಂಡವೊಂದು ಉತ್ತರ ಕೊರಿಯಾಗೆ ಪ್ರಯಾಣ ಬೆಳೆಸಿದ್ದು, ಈ ತಂಡದಲ್ಲಿ ಚೀನಾ ಕಮ್ಯೂನಿಸ್ಟ್ ಪಕ್ಷದ ಪ್ರಮುಖ ನಾಯಕರೊಬ್ಬರಿದ್ದಾರೆ. ಕಿಮ್ ಆರೋಗ್ಯದ ವಿಚಾರದಲ್ಲಿ ಚೀನಾ ತುಸು ಬಿಗಿಯಾಗಿಯೇ ಇದೆ. ಆದರೆ ಉತ್ತರ ಕೊರಿಯಾ ಮಾಧ್ಯಮವೊಂದರ ಪ್ರಕಾರ ಇದೇ 12 ರಂದು ಕಿಮ್ ಶಸ್ತ್ರಚಿಕಿತ್ಸೆಗೆ ಒಳಗಾದರು.
ಇದಾದನಂತರ ಅವರ ಆರೋಗ್ಯದಲ್ಲಿ ತುಸು ಏರು ಪೇರಾಗಿದೆ ಎಂಬುದು ಕೊರಿಯಾ ಮಾಧ್ಯಮದಿಂದ ತಿಳಿದು ಬಂದಿರುವ ಮಾಹಿತಿ. ಇಷ್ಟಾದರೂ ಉತ್ತರ ಕೊರಿಯಾ ಆಡಳಿತ ವರ್ಗ ಅಧಿಕೃತವಾಗಿ ಏನನ್ನೂ ಹೇಳಲು ತಯಾರಿಲ್ಲ. ಒಂದು ಮೂಲದ ಪ್ರಕಾರ, ಶೀಘ್ರವೇ ಕಿಮ್ ದೇಶದ ಜನತೆ ಮುಂದೆ ಪ್ರತ್ಯಕ್ಷವಾಗಲಿದ್ದಾರಂತೆ !