Tuesday, August 16, 2022

Latest Posts

ಸಲ್ಲು ಅಭಿಮಾನಿಗಳಿಗೆ ಬೇಸರ: ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಲೀಕ್​ ಆಯಿತು ರಾಧೆ ಸಿನಿಮಾ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್’​ ಸಿನಿಮಾ ಈದ್​ ಹಬ್ಬದ ದಿನವಾದ ಇಂದು (ಮೇ 13) ರಿಲೀಸ್​ ಆಗಿದೆ.
ಟ್ವಿಟರ್​ನಲ್ಲಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ರಾಧೆ ಸಿನಿಮಾ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಆನ್​ಲೈನ್​ನಲ್ಲಿ ಲೀಕ್​ ಆಗಿದೆ. ಅದೂ ಎಚ್​​ಡಿ ಪ್ರಿಂಟ್​ ಅನ್ನೋದು ಬೇಸರದ ವಿಚಾರ.
ಕೊರೋನಾ ಎರಡನೆ ಅಲೆ ಮಿತಿಮೀರಿ ಹರಡುತ್ತಿರುವುದರಿಂದ ಸಾಕಷ್ಟು ಕಡೆಗಳಲ್ಲಿ ಲಾಕ್​ಡೌನ್​ ಆದೇಶ ಹೊರಡಿಸಲಾಗಿದೆ. ಹೀಗಾಗಿ ದೇಶದ ಬಹುತೇಕ ಚಿತ್ರಮಂದಿರಗಳನ್ನು ಮುಚ್ಚುವ ಆದೇಶ ಹೊರಡಿಸಲಾಗಿದೆ. ಇದರ ಮಧ್ಯೆಯೂ ಸಲ್ಮಾನ್​ ಖಾನ್​ ನಟನೆಯ ಬಹುನಿರೀಕ್ಷಿತ ರಾಧೆ ಸಿನಿಮಾ ಒಟಿಟಿ ಹಾಗೂ ಲಾಕ್​ಡೌನ್​ ಇಲ್ಲದೇ ಇರುವ ದೇಶ, ನಗರಗಳ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಆದರೆ ಮೊದಲ ದಿನವೇ ಚಿತ್ರ ಲೀಕ್​ ಆಗಿದೆ.
ತಮಿಳ್​ ರಾಕರ್ಸ್​ ಸೇರಿ ಸಾಕಷ್ಟು ವೆಬ್​ಸೈಟ್​ಗಳಲ್ಲಿ ರಾಧೆ ಸಿನಿಮಾ ಲೀಕ್ ಆಗಿದ್ದು, ಇದರ ಬಗ್ಗೆ ಸಲ್ಲು ಅಭಿಮಾನಿಗಳು ಕಿಡಿಕಾರಿದ್ದಾರೆ. ಸಿನಿಮಾ ಲೀಕ್​ ಮಾಡಿದವರ ವಿರುದ್ಧ ಸೈಬರ್​ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​ ಸಿನಿಮಾಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಫ್​ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅವರು ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಅವಕಾಶ ಇರುವ ಕಡೆಗಳಲ್ಲಿ ‘ರಾಧೆ’ ಚಿತ್ರಮಂದಿರಗಳಲ್ಲೇ ತೆರೆ ಕಾಣಲಿದೆ. ಉಳಿದಂತೆ ಡಿ2ಎಚ್​, ಓಟಿಟಿ ಪ್ಲಾಟ್​ಫಾರ್ಮ್​ ಮುಂತಾದ ವೇದಿಕೆಗಳಲ್ಲಿ ಹಣ ಪಾವತಿಸಿ ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss