Saturday, July 2, 2022

Latest Posts

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರನ್ನು ದೂರವಿಡುವುದಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ಕೆಲವು ವರ್ಷಗಳಿಂದ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಗಣರಾಜ್ಯೋತ್ಸವದಲ್ಲಿ ಪುರುಷ ಪಡೆಯನ್ನು ಮುನ್ನಡೆಸಿದ ತಾನಿಯಾ ಶೆಗ್ರಿಲ್ ರನ್ನು ಉದಾಹರಣೆಯಾಗಿ ನೀಡಿ, ಹಿಂದೆ ಭಾರತದಲ್ಲಿ ಯಾವ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲವೋ ಅಂತಹ ಕ್ಷೇತ್ರಗಳ ನೇತೃತ್ವವನ್ನು ಇಂದು ಮಹಿಳೆಯರೇ ವಹಿಸಿದ್ದಾರೆ.

ಹೀಗಿರುವಾಗ ಸಶಸ್ತ್ರ ಪಡೆಗಳಿಂದ ಮಹಿಳೆಯರನ್ನು ದೂರವಿಡುವುದಕ್ಕೆ ಅರ್ಥವಿರುವುದಿಲ್ಲ. ದೇಶದಲ್ಲಿನ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶ ಎಂದು ನೀತಿ ಆಯೋಗ ಆಯೋಜಿಸಿದ್ದ ‘ವುಮನ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ ಅವಾರ್ಡ್ಸ್’ ಸಮಾರಂಭದಲ್ಲಿ ಮಾತನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss