Sunday, July 3, 2022

Latest Posts

ಸಹಕಾರಿ ಬ್ಯಾಂಕಿನ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯಲ್ಲಿ ನಡೆಯಿತು ಸ್ವಪಕ್ಷೀಯರ ಕಿತ್ತಾಟ!

ಹೊಸ ದಿಗಂತ ವರದಿ ಬಾಗಲಕೋಟೆ:

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಲ್ಲಿ ಸ್ವಪಕ್ಷೀಯ ನಾಯಕರ ಸ್ವಾರ್ಥ ರಾಜಕಾರಣದ ವಿರುದ್ದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹರಿಹಾಯ್ದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೆ.ಆದರೆ ನನಗೆ ಜಿಲ್ಲಾ‌ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯ ಆದಿಯಾಗಿ ಯಾವ ಕಾಂಗ್ರೆಸ್ ನಾಯಕರು ನನಗೆ ಪೋನ್ ಕರೆ ಮಾಡಿಲ್ಲ ಎಂದರು.

ನನ್ನನ್ನು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ ಅವರು ನನಗೆ ಮೋಸ ಮಾಡಿದ್ದಾರೆಂದು ಸ್ವಪಕ್ಷೀಯ ನಾಯರ ವಿರುದ್ದ ಹರಿಹಾಯ್ದರು.

ಡಿಸಿಸಿ ಬ್ಯಾಂಕ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಮತ ಚಲಾಯಿಸುವ ಕುರಿತು ನಮ್ಮ‌ನಾಯಕರಾದವರು ಕರೆ ಮಾಡಲಿಲ್ಲ ಆದರೆ ನನಗೆ ಪೋನ್ ಕರೆ ಮಾಡಿರುವುದಾಗಿ ಸುಳ್ಳು ಹೇಳುತ್ತಿರುವ ಎಸ್.ಆರ್.ಪಾಟೀಲ, ಅಜಯಕುಮಾರ ಸರನಾಯಕ ಹಾಗೂ ತೋಯ್ದ ಬಟ್ಟೆಯಲ್ಲಿ ಕೂಡಲಸಂಗಮಕ್ಕೆ ಬರಲಿ ನಾನೂ ಬರುವೆ ಎಂದು ಕಾಶಪ್ಪನವರ ಸವಾಲು ಹಾಕಿದರು.

ಡಿಸಿಸಿ ಬ್ಯಾಂಕಿನಲ್ಲಿ ನಡೆದಿರುವ ಎಲ್ಲ ಹಗರಣ ಹೊರ ತರುತ್ತೇನೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಬದಲಾವಣೆ ಆಗುವುದು ನಿಶ್ಚಿತ ಎಂದು ಹೇಳಿದರು. ಜಿಲ್ಲೆಯಲ್ಲಿ ನನ್ನದೇ ಜನಾಂಗ, ಕಾರ್ಯಕರ್ತರು ಇದ್ದಾರೆ. ಆದರೆ ಖುರ್ಚಿಗಾಗಿ ಎಸ್.ಆರ್.ಪಾಟೀಲ, ಸರನಾಯಕ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ‌ ಬೆಂಬಲಿತ‌ ರಾಮಣ್ಣ ತಳೇವಾಡ, ಅಗಸಿಮುಂದಿನ ಕಾಂಗ್ರೆಸ್ ನಾಯಕರನ್ನು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಚುನಾವಣೆಯಲ್ಲಿ ಬೆಂಬಲಿಸಿರುವುದು ಎಲ್ಲರಿಗೂ ಗೊತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss