Monday, August 8, 2022

Latest Posts

ಸಹಕಾರ ಸಂಘದಿಂದ ಖರೀದಿಸಿದ ಭತ್ತದ ಬೀಜಕ್ಕೆ ಬೆಂಕಿ ರೋಗ: ರೈತರ ಆಕ್ರೋಶ

ಹೊಸ ದಿಗಂತ ವರದಿ, ಕುಶಾಲನಗರ: 

ರೈತರು ಸಹಕಾರ ಸಂಘಗಳಿಂದ ಖರೀದಿಸಿ ಬಿತ್ತನೆ ಮಾಡಿದ ಭತ್ತ ತಳಿಗೆ ಈ ಬಾರಿ ಶೇ.90ರಷ್ಟು ಬೆಂಕಿ ರೋಗ ಕಾಣಿಸಿಕೊಂಡಿದ್ದು, ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ಹೈಬ್ರೀಡ್ ತಳಿಗಳೆಂದು ಸಹಕಾರ ಸಂಘದಿಂದ ಖರೀದಿಸಿ ತಮ್ಮ ನೀರಾವರಿ ಜಮೀನಿನಲ್ಲಿ ಭತ್ತದ ನಾಟಿ ಮಾಡಿದ್ದರು. ಆದರೆ ಈ ಬಿತ್ತನೆ ಬೀಜದಿಂದ ನಾಟಿ ಮಾಡಿದ ಬೆಳೆ ಶೇಕಡಾ 90 ರಷ್ಟು ಬೆಂಕಿ ರೋಗಕ್ಕೆ ತುತ್ತಾಗಿದ್ದು, ಈ ಬೆಳೆ ಗರ್ಭ ಧರಿಸಿ ಭತ್ತದ ಕಾಳುಗಳನ್ನು ಕಟ್ಟಿರುವುದಿಲ್ಲ. ಅಲ್ಲದೆ ನಾಟಿ ಮಾಡಿದ ಇಡೀ ಜಮೀನು ಸಂಪೂರ್ಣವಾಗಿ ಒಣಗಿ ನಿಂತಿದೆ.
ಕೃಷಿ ಇಲಾಖೆಯ ಅನುಮೋದನೆಯ ಮೇರೆಗೆ ಪ್ರಿಯಾ ಎಂಬ ಭತ್ತದ ತಳಿಯನ್ನು ಕೂಡಿಗೆಯ ಸಹಕಾರ ಸಂಘದ ಮೂಲಕ ಬೀಜ ಕಂಪನಿಯವರು ವಿತರಣೆ ಮಾಡಿದ್ದು, ಈ ಬೀಜ ಕಳಪೆಯಾಗಿರುವುದಲ್ಲದೆ, ಭತ್ತದ ಬೆಳೆ ಬೆಂಕಿ ರೋಗಕ್ಕೆ ತುತ್ತಾಗಿದೆ ಎಂದು ಅನೇಕ ರೈತರು ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ತಮ್ಮ ಆಕ್ರೋಶ ಹೊರಗೆಡವಿದ್ದಾರೆ.
ಹೈಬ್ರೀಡ್ ತಳಿಯ ಭತ್ತದ ಅಕ್ಕಿ ಊಟಕ್ಕೆ ಉಪಯುಕ್ತವಾಗಿರುತ್ತದೆ ಎಂಬ ನಂಬಿಕೆಯಿಂದ ಕೂಡಿಗೆ ಭಾಗದ ರೈತರು ಈ ಬಾರಿ ಹೊಸ ತಳಿಯನ್ನು ನಾಟಿ ಮಾಡಿದ್ದರು. ಅದರೆ ಹಾರಂಗಿ ಅಚ್ಚುಕಟ್ಟು ಪ್ರದೇಶದ ಹುದುಗೂರು ,ಮದಲಾಪುರ ಕಣಿವೆ, ಮಲ್ಲೇನಹಳ್ಳಿ, ಮಾವಿನಹಳ್ಳ ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದ್ದು, ರೈತರು ಫಸಲು ಇಲ್ಲದೆ ಪರದಾಡುವ ಪ್ರಸಂಗ ಎದುರಾಗಿದೆ.
ಹಾರಂಗಿ ಅಚ್ಚುಕಟ್ಟು ಪ್ರದೇಶದ ಮಲ್ಲೇನಹಳ್ಳಿಯ ರೈತರಾದ ಮಂಜುನಾಥ, ಲೋಕೇಶ್, ಗೀರಿಶ್, ಮದಲಾಪುÀ್ರದ ಕುಮಾರ, ಕೃಷ್ಣ, ಕಣಿವೆಯ ಕೆ.ಆರ್. ರಂಗಸ್ವಾಮಿ, ಕೂಡಿಗೆಯ ಕೆ.ಎನ್.ಮಂಜುನಾಥ ಸೇರಿದಂತೆ ಅನೇಕ ರೃತರು ಬೆಳೆ ಹಾಳಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss