Monday, August 8, 2022

Latest Posts

ಸಹಜ ಸ್ಥಿತಿಯತ್ತ ಮರಳುತ್ತಿರುವ ಉಡುಪಿ: ಇಳಿದ ನೆರೆ ನೀರು

ಉಡುಪಿ: ಮೇಘ ಸ್ಪೋಟದಿಂದ ಜಲ ದಿಗ್ಬಂಧನ ಉಂಟಾದ ಉಡುಪಿಯಲ್ಲಿ ನೆರೆ ನೀರು ನಿಧಾನಕ್ಕೆ ಇಳಿಯುತ್ತಿದೆ. ನಗರ ಪ್ರದೇಶದಲ್ಲಿ ರಾತ್ರಿಯಿಂದಲೇ ಮಳೆಯ ತೀವ್ರತೆ ಕಡಿಮೆಯಾಗಿದ್ದು, ನೆರೆ ಇಳಿಮುಖವಾಗಿದೆ. ಗ್ರಾಮೀಣ ಭಾಗದಲ್ಲಿಯೂ ಇಂದು ನೆರೆ ತಗ್ಗಿದೆ. ಸಹಜ ಸ್ಥಿತಿಯತ್ತ ಮರಳುತ್ತಿರುವ ಉಡುಪಿಯಲ್ಲಿ ಮಹಾ ಪ್ರವಾಹ ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ.
ನಿನ್ನೆ ಗರಿಷ್ಠ 11 ಮೀಟರ್ ಮಟ್ಟದಲ್ಲಿ ಹರಿಯುತ್ತಿದ್ದ ಸ್ವರ್ಣಾ ನದಿಯ ನೀರಿನ ಮಟ್ಟದಲ್ಲಿಯೂ ಇಳಿಕೆಯಾಗುತ್ತಿದೆ. ಸುಮಾರು 3 ಮೀ.ಗಳಷ್ಟು ನೀರು ಇಳಿದಿದ್ದು, ಪ್ರಸಕ್ತ ನದಿಯಲ್ಲಿ ನೀರಿನ ಮಟ್ಟ 8 ಮೀ.ಗಳಷ್ಟಿದೆ. ಶೀರೂರು ಸಮೀಪದ ಮಾಣಾಯಿ ಸೇತುವೆಯ ಮೇಲೆ ನಿನ್ನೆ ತಡರಾತ್ರಿಯವರೆಗೂ ನೀರು ಹರಿದಿದೆ. ಇಂದು ಬೆಳಗ್ಗಿನ ಜಾವ ನೆರೆ ನೀರು ಕಡಿಮೆಯಾಗಿದೆ. ಆದರೆ 30 ವರ್ಷ ಹಳೆಯದಾದ ಸೇತುವೆಗೆ ಭಾರೀ ಹಾನಿಯಾಗಿದೆ. ನೆರೆ ನೀರಿನಲ್ಲಿ ತೇಲಿಬಂದ ಮರಮಟ್ಟುಗಳು ಹೊಡೆದು ಸೇತುವೆಯ ರಕ್ಷಣಾ ತಡೆಗೋಡೆ ಸಂಪೂರ್ಣ ತುಂಡಾಗಿ ಬಿದ್ದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss