ಮುಂಬೈ: ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಹಾಗೂ ಸೋಂಕಿತರು ಗುಣಮುಖರಾಗುವವರ ಹೆಚ್ಚಾಗುತ್ತಿರುವುದರಿಂದ ನವೆಂಬರ್ ಅಂತ್ಯದ ವೇಳೆಗೆ ಮಹಾರಾಷ್ಟ್ರದಲ್ಲಿ ಅನ್ ಲಾಕ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸು ಸರ್ಕಾರ ನಿರ್ಧರಿಸಿದೆ.
ನವೆಂಬರ್ ವೇಳೆಗೆ ಶಾಲೆ ಕಾಲೇಜು, ಜಿಮ್, ಧಾರ್ಮಿಕ ಸ್ಥಳಗಳನ್ನು ಹಂತ ಹಂತವಾಗಿ ತೆರೆಯಲಾಗುವುದು. ರಾಜ್ಯಾದ್ಯಂತ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುವುದು , ಕೆಲವೇ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ.