ಮಂಗಳೂರು: ಕೆಲವು ದಿನಗಳ ಹಿಂದೆ ಪುತ್ತೂರಿನ ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ರವರು ರೋಟರಿ ಕ್ಲಬ್ ಪುತ್ತೂರು ಯುವ ಸದಸ್ಯರು ಇರುವ ವಾಟ್ಸಪ್ ಗ್ರೂಪ್ ಗೆ ಮೆಸೇಜ್ ಮಾಡಿ ಕೊರನಾ ಸಂಕಷ್ಟದಲ್ಲಿ ಹಗಲಿರುಳು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರ ಹಿತದೃಷ್ಟಿಯಿಂದ ಅವರಿಗೆ ಹ್ಯಾಟ್ ಮತ್ತು ಕೊಡೆಯನ್ನು ನೀಡುವಂತೆ ದಾನಿಗಳ ಸಹಕಾರ ಕೇಳಿದ್ದರು.
ಇದಕ್ಕೆ ತಕ್ಷಣ ಸ್ಪಂದಿಸಿದ ರೋಟರಿ ಯುವದ ಸದಸ್ಯರು ಅಗತ್ಯವಿರುವ 275 ಹ್ಯಾಟ್ ನೀಡಲು ಮುಂದೆ ಬಂದಿದ್ದು, ಅದರಂತೆ ಇಂದು ರೋಟರಿ ಪುತ್ತೂರು ಯುವಕರು ನಿಯೋಜಿತ ಅಧ್ಯಕ್ಷ ಡಾ.ಹರ್ಷಕುಮಾರ ರೈ, ಕಾರ್ಯದರ್ಶಿ ಉಮೇಶ್ ನಾಯಕ್ ಹಾಗೂ ಸದಸ್ಯರಾದ ಪುತ್ತೂರು ಸಚಿನ್ ಟ್ರೆಂಡಿಗ್ ನ ಸಚಿನ್ ನಾಯಕ್ ಸೇರಿಕೊಂಡು ಹ್ಯಾಟ್ಗಳನು ಮಾನ್ಯ ಸಹಾಯಕ ಕಮಿಷನರ್ ಗೆ ಹಸ್ತಾಂತರಿಸಿದರು.