Tuesday, August 16, 2022

Latest Posts

ಸಹಾಯಕ ಜೈಲರ್, ಓರ್ವ ಸರ್ಕಾರಿ ವೈದ್ಯ, ಎಂಟು ಜನ ಪೊಲೀಸರಿಗೆ, ಲ್ಯಾಬ್ ಟೆಕ್ನಿಷಿಯನ್ ಸಹಿತ 50 ಜನರಿಗೆ ಕೋವಿಡ್ ಸೋಂಕು ದೃಢ

ಹಾವೇರಿ: ಸಹಾಯಕ ಜೈಲರ್, ಓರ್ವ ಸರ್ಕಾರಿ ವೈದ್ಯ, ಎಂಟು ಜನ ಪೊಲೀಸರಿಗೆ, ಲ್ಯಾಬ್ ಟೆಕ್ನಿಷಿಯನ್, ವಾಹನ ಚಾಲಕ, ವ್ಯಾಪಾರಿ ಸೇರಿ ಜಿಲ್ಲೆಯಲ್ಲಿ ಬುಧವಾರ ೫೦ ಜನರಿಗೆ ಕೋವಿಡ್-೧೯ ಸೋಂಕು ದೃಢಪಟ್ಟಿದೆ. ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೮೭೭ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ ೫೦೩ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ೨೪ ಜನರು ಮೃತಪಟ್ಟಿದ್ದಾರೆ. ೩೫೦ ಪ್ರಕರಣಗಳು ಸಕ್ರಿಯವಾಗಿವೆ ಎಂದು ನೂತನ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಅವರು ತಿಳಿಸಿದ್ದಾರೆ.
ಜುಲೈ ೨೯ ರಂದು ಹಾನಗಲ್ ೨, ಬ್ಯಾಡಗಿ ೪, ಸವಣೂರು ೫, ರಾಣೇಬೆನ್ನೂರು ೭, ಶಿಗ್ಗಾಂವ ೯, ಹಿರೇಕೆರೂರು ೧೧ ಹಾಗೂ ಹಾವೇರಿ ತಾಲೂಕಿನಲ್ಲಿ ೧೨ ಪ್ರಕರಣ ಪತ್ತೆಯಾಗಿವೆ.
ಹಾನಗಲ್ ವಿಜಯನಗರದ ೨೯ ವರ್ಷದ ಪೊಲೀಸ್, ಕಾಗಿನೆಲೆ ಪೊಲೀಸ್ ವಸತಿ ಗೃಹದ ೩೪ ವರ್ಷದ ಹಾಗೂ ೩೦ ವರ್ಷದ ಪೊಲೀಸನಿಗೆ, ಸವಣೂರು ತಾಲೂಕಿನ ಪಶು ಆಸ್ಪತ್ರೆ ಡಿ ಗ್ರೂಪ್ ನೌಕರ ೨೫ ವರ್ಷದ ಯುವಕ ಸೋಂಕು ದೃಢಪಟ್ಟಿದೆ.
ರಾಣೇಬೆನ್ನೂರು ಸಿದ್ದೇಶ್ವರನಗರದ ಪೊಲೀಸ್, ಶಿಗ್ಗಾಂವ ತಹಶೀಲ್ದಾರ ಕಚೇರಿಯ ೪೨ ವರ್ಷದ ಪುರುಷ, ಬಂಕಾಪುರ ಪೊಲೀಸ್ ಠಾಣೆಯ ೨೮ ವರ್ಷದ ಪೊಲೀಸ್‌ನಿಗೆ, ಹಿರೇಕೆರೂರು ತಾಲೂಕಿನ ಹಂಸಭಾವಿ ಪೊಲೀಸ್ ಠಾಣೆಯ ೩೦ ವರ್ಷದ ಪೊಲೀಸ್, ಹಿರೇಕೆರೂರು ಪೊಲೀಸ್ ವಸತಿ ಗೃಹದ ೨೮ ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹಾವೇರಿ ನಗರದ ಪುರದ ಓಣಿಯ ೫೧ ವರ್ಷದ ಕೆ.ಎಸ್.ಆರ್.ಟಿ.ಬಸ್ ಚಾಲಕ, ಕೆರಿಮತ್ತಿಹಳ್ಳಿ ಜಿಲ್ಲಾ ಉಪ ಕಾರಾಗೃಹದ ಸಹಾಯಕ ಜೈಲರ, ಕರ್ಜಗಿ ಗ್ರಾಮದ ಐ.ಎಲ್.ಐ ಲಕ್ಷಣದ ೨೫ ವರ್ಷದ ವೈದ್ಯ, ಆರೋಗ್ಯ ಇಲಾಖೆ ವಸತಿ ಗೃಹದ ೫೯ ವರ್ಷದ ಸಿನಿಯರ್ ಲ್ಯಾಬ್ ಟೆಕ್ನಿಷಿಯನ್ ಸೋಂಕು ದೃಢಪಟ್ಟಿದೆ.
ಸವಣೂರು ಹಾಗೂ ಶಿಗ್ಗಾಂವಿ ತಾಲೂಕಿನ ತಲಾ ಓರ್ವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಅವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss