Sunday, August 14, 2022

Latest Posts

ಸಹೋದರಿ, ಮಕ್ಕಾಳಿಗಾಗಿ ವಿಶೇಷ ಚಾರ್ಟರ್ ವಿಮಾನ ಬುಕ್‌ ಸುದ್ದಿ: ಬಾಲಿವುಡ್‌ ನಟ ಅಕ್ಕಿ ಗರಂ!

ಮುಂಬೈ: ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ತನ್ನ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಕ್ಕಳಿಗಾಗಿ ವಿಶೇಷ ಚಾರ್ಟರ್ ವಿಮಾನವೊಂದನ್ನು ಬುಕ್‌ ಮಾಡಿದ್ದಾರೆ ಎಂಬ ತನ್ನ ಬಗೆಗಿನ ಸುದ್ದಿಗಳ ಬಗ್ಗೆ ಗರಂ ಆಗಿರುವ ಬಾಲಿವುಡ್‌ ನಟ ಅಕ್ಷಯ್ ಕುಮಾರ್, ಇಂತಹ ಸುಳ್ಳು ವರದಿಗಳ ಮೇಲೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ನನ್ನ ತಂಗಿ ಮತ್ತು ಅವಳ ಇಬ್ಬರು ಮಕ್ಕಳಿಗಾಗಿ ವಿಶೇಷ ಚಾರ್ಟರ್ ವಿಮಾನವೊಂದನ್ನು ಬುಕ್‌ ಮಾಡಿದ್ದೇನೆ ಎಂಬ ಸುದ್ದಿ ಹರಡುತ್ತಿದೆ. ಲಾಕ್‌ಡೌನ್‌ನಿಂದಾಗಿ ಆಕೆ ಎಲ್ಲಿಗೂ ಪ್ರಯಾಣ ಮಾಡಿಲ್ಲ ಹಾಗೂ ಆಕೆಗೆ ಇರುವುದು ಒಂದೇ ಮಗು! ಇಂತಹ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು. ಅಲ್ಲದೆ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕಾನೂನು ಹೂರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss