Wednesday, June 29, 2022

Latest Posts

ಸಾಂಕ್ರಾಮಿಕರೋಗದಿoದಾಗಿ ಸೈಬರ್ ದಾಳಿಯಲ್ಲಿ ಭಾರೀ ಏರಿಕೆ: ಐಟಿ ವಲಯ ಕಳವಳ

ಹೊಸದಿಗಂತ ವರದಿ, ಮೈಸೂರು:

ಸ್ಟಾರ್ಟಪ್‌ಗಳನ್ನು ಮತ್ತು ಯುವ ಸಂಶೋಧಕರನ್ನು ಬೆಳೆಸುವ ಮೂಲಕ ಸೈಬರ್ಸೆಕ್ಯುರಿಟಿಸೆಂಟರ್‌ಆಫ್‌ಎಕ್ಸಲೆನ್ಸ್ (ಸಿಒಇ)ಅದ್ಭುತ ಉತ್ಪನ್ನವೊಂದನ್ನು ಬೆಳೆಸುವ ನಿಟ್ಟಿನಲ್ಲಿ ಸಮರ್ಥ ವೇಗವರ್ಧಕ ಮತ್ತು ಪ್ರಮುಖ ಪಾಲುದಾರನಾಗಿ ಕೆಲಸ ಮಾಡಲಿದೆ ಎಂದು ಎಸ್‌ಟಿಪಿಐ ಮಹಾನಿರ್ದೇಶಕ ಡಾ. ಓಂಕಾರ್ ರೈ ಹೇಳಿದರು.
ಸಿಐಐ ಮೈಸೂರು ವಾರ್ಷಿಕ ಐಟಿ ಸಮ್ಮೇಳನದಲ್ಲಿ ಮೈಸೂರಿನಲ್ಲಿ ಎಸ್‌ಟಿಪಿಐನ ಹೊಸಸೌಲಭ್ಯಸೈಬರ್ ಸೆಕ್ಯುರಿಟಿಸೆಂಟರ್‌ಆಫ್‌ಎಕ್ಸಲೆನ್ಸ್ ಘೋಷಿಸಿ ಮಾತನಾಡಿದರು.
ಪ್ರಾಸ್ತಾವಿಕ ಭಾಷಣಮಾಡಿದ ಇನ್ಫೋಸಿಸ್‌ನ ಸಿಒಒ ಯು.ಬಿ.ಪ್ರವೀಣ್ ರಾವ್, ಸಾಂಕ್ರಾಮಿಕರೋಗದಿoದಾಗಿ ಸೈಬರ್ ದಾಳಿಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗಳು ಸೈಬರ್ ದಾಳಿಯಿಂದ ಅಗತ್ಯವಾದ ರಕ್ಷಣೆಹೊಂದಿಲ್ಲದಿರುವುದರಿoದ ಇದು ಹ್ಯಾಕ್‌ಆಗಲು ಮತ್ತಷ್ಟು ಎಡೆಮಾಡಿಕೊಟ್ಟಂತಾಗಿದೆ ಎಂದು ಹೇಳಿದರು. ಸಾಂಕ್ರಾಮಿಕರೋಗದನoತರ ಸೈಬರ್ ದಾಳಿಯಲ್ಲಿ ಶೇಕಡಾ 300ರಷ್ಟು ಹೆಚ್ಚಳವಾಗಿದೆ. 2025 ರಹೊತ್ತಿಗೆ ಕೇವಲ ಸೈಬರ್ ಸೇವೆಗಳ ಖರ್ಚು ಯುಎಸ್‌ಡಿ 100 ಬಿಲಿಯನ್‌ಗಳನ್ನು ಮುಟ್ಟುತ್ತದೆ. 2030 ರವೇಳೆಗೆ, ಸೈಬರ್‌ಉತ್ಪನ್ನಗಳಮಾರುಕಟ್ಟೆ ಯುಎಸ್‌ಡಿ 35 ಬಿಲಿಯನ್ ತಲುಪಲಿದೆ, ಇದು ಪ್ರಸ್ತುತ ಯುಎಸ್‌ಡಿ 4 ಬಿಲಿಯನ್ ಮಾರುಕಟ್ಟೆಯಾಗಿದೆ ಎಂದು ತಿಳಿಸಿದರು.
ಇಂದು ಸೈಬರ್ ಪ್ರತಿಭೆಗಳ ಭಾರಿಕೊರತೆಯಿದೆ, ಇದರಿಂದ ಸೈಬರ್ ಸೆಕ್ಯುರಿಟಿ ಸೆಂಟರ್ ಆಫ್‌ಎಕ್ಸಲೆನ್ಸ್ ಅತ್ಯಂತ ಪ್ರಸ್ತುತಎಂದರು.
ಮೈಸೂರಿನ ರಾಜವಂಶಸ್ಥ ಯದುವೀರ್‌ಕೃಷ್ಣದತ್ತಚಾಮರಾಜಒಡೆಯರ್ ಮಾತನಾಡಿ, ಮೈಸೂರು ಭಾರತಕ್ಕೆ ಶಾಶ್ವತ ಮೌಲ್ಯದ ದೊಡ್ಡ ಸಂಸ್ಥೆಗಳನ್ನು ತರುವ ಮೂಲಕ ಬದಲಾವಣೆಗಳನ್ನು ಸೃಷಿಸುತ್ತಿದೆ ಎಂದರು. ಸೈಬರ್ ಸೆಕ್ಯುರಿಟಿ ಸೆಂಟರ್ ಆಫ್‌ಎಕ್ಸಲೆನ್ಸ್ಕ್ಕೆಶಾಶ್ವತ ಮೌಲ್ಯತರಲಿದೆ ಎಂದರು.
ಮೈಸೂರನ್ನು ಸೈಬರ್ ಭದ್ರತಾ ಕ್ಷೇತ್ರದಲ್ಲಿ ಪ್ರವರ್ತಕನಾಗಿ ಉತ್ತೇಜಿಸಲು ಸಿಐಐ ಸಮಾನಮನಸ್ಕ ಸಂಸ್ಥೆಗಳು ಮತ್ತು ಆಡಳಿತ ಮಂಡಳಿಗಳೊoದಿಗೆ ಕೈ ಜೋಡಿಸಿದ್ದಕ್ಕಾಗಿ ಸಂತೋಷವಾಗಿದೆ. ಮೈಸೂರಿಗೆ ದೇಶದಲ್ಲೇ ಸೈಬರ್ ಸೆಕ್ಯುರಿಟಿ ಹಬ್‌ಆಗಿ ಬೆಳೆಯಲು ಎಲ್ಲಾ ಸಾಮರ್ಥ್ಯವಿದೆ ಎಂದು ತಿಳಿಸಿದರು.
ಸಮ್ಮೇಳನವನ್ನು ಉದ್ದೇಶಿಸಿಮಾತನಾಡಿದ ಸಿಐಐ ಮೈಸೂರು ಉಪಾಧ್ಯಕ್ಷ ಪವನ್ ರಂಗಾ, ಪ್ರಸ್ತುತ ನಮ್ಮ ಹೆಚ್ಚಿನ ವ್ಯಾಪಾರ ಚಟುವಟಿಕೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ ಮತ್ತು ಅಂತಹಎಲ್ಲಾಚಟುವಟಿಕೆಗಳು ಡೇಟಾವನ್ನು ಉತ್ಪಾದಿಸುತ್ತವೆ, ಇದು ಆನ್‌ಲೈನ್‌ನಲ್ಲಿ ಲಭ್ಯವಿದೆ. ಸೈಬರ್ ದಾಳಿಗೂಗುರಿಯಾಗುತ್ತವೆ. ರಕ್ಷಣಾ ವಲಯದಲ್ಲಿ ಭೌತಿಕ ಯುದ್ಧಕ್ಕಿಂತ ಸೈಬರ್ ಯುದ್ಧವೇ ಹೆಚ್ಚಿನ ಮಹತ್ವ ಪಡೆಯಲಿದೆ. ಸೈಬರ್ ಭದ್ರತೆ ಮನುಷ್ಯನದೇ ಸಮಸ್ಯೆಯಾಗಿದೆ. ಮತ್ತು ನಾವು ಅದನ್ನು ಅದರದೇ ರೀತಿಯಲ್ಲಿ ನೋಡಬೇಕಾಗಿದೆ ಬುದ್ಧಿವಂತಿಕೆಯಿoದ ನಿರ್ವಹಿಸಬೇಕಾಗಿದೆ ಹೇಳಿದರು.
ಸಮ್ಮೇಳನದಲ್ಲಿ ಮೈಸೂರು, ಬೆಂಗಳೂರು ಮತ್ತು ಇತರ ನಗರಗಳಿಂದ 300 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss