Saturday, June 25, 2022

Latest Posts

ಸಾಂಬಾ ಗಡಿಯಲ್ಲಿ ಪಾಕ್ ನುಸುಳುಕೋರನನ್ನು ಸದೆ ಬಡಿದ ಭದ್ರತಾ ಪಡೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಗಡಿಯಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹತ್ಯೆ ಮಾಡಿದೆ.
ಇಂದು ಬೆಳಗ್ಗೆ 9.45ರ ಸುಮಾರಿಗೆ ಸಾಂಬಾದ ಚಕ್ ಫಕ್ವಿರಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಗಡಿಯೊಳಗೆ ನುಸುಳುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ತಕ್ಷಣವೇ ಕಾರ್ಯ ಪ್ರವೃತ್ತರಾಗಿದ್ದಾರೆ. ಆತನ ಮೇಲೆ ಗುಂಡು ಹಾರಿಸಿ, ಸದೆ ಬಡಿದಿದ್ದಾರೆ.
ಭಾರತದ ಗಡಿಯಿಂದ 40 ಮೀಟರ್​ ದೂರದಲ್ಲಿ ಬಿದ್ದ ಮೃತದೇಹವನ್ನು ವಶಕ್ಕೆ ಪಡೆದಿದ್ದು, ಶೋಧ ಕಾರ್ಯಾಚರಣೆ ಮುಂದುವರೆಸಿರುವುದಾಗಿ ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss